2 ವರ್ಷದಲ್ಲಿ 200 ಶತಕೋಟಿ ರೂ ಸಾಲ ಮನ್ನಾ ಮಾಡಿದ ಎಸ್ಬಿಐ

ಮುಂಬೈ : ಭಾರತದ ಅತಿ ದೊಡ್ಡ ಬ್ಯಾಂಕ್ ಎನಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ 2016-17ರ ಅವಧಿಯಲ್ಲಿ 203.39 ಶತಕೋಟಿ ರೂ ಮೌಲ್ಯದ ಮರುಪಾವತಿಯಾಗದ ಸಾಲಗಳನ್ನು ವಜಾ ಮಾಡಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಈ ಹಣಕಾಸು ವರ್ಷದಲ್ಲಿ ಸಾರ್ವಜನಿಕ ಬ್ಯಾಂಕುಗಳು ಒಟ್ಟು 816.83 ಶತಕೊಟಿ ರೂ ಮೌಲ್ಯದ ಸಾಲ ವಜಾ ಮಾಡಿದ್ದು ಎಸ್‍ಬಿಐ ಹೆಚ್ಚಿನ ಪಾಲನ್ನು ಹೊಂದಿದೆ.  ಈ ಅವಧಿಯಲ್ಲಿ ಸಹವರ್ತಿ ಬ್ಯಾಂಕುಗಳು  ಎಸ್‍ಬಿಐನೊಡನೆ ವಿಲೀನವಾಗಿರಲಿಲ್ಲ. 2012ರಲ್ಲಿ ಸಾರ್ವಜನಿಕ ಬ್ಯಾಂಕುಗಳು 272..31 ಶತಕೋಟಿ ರೂ ಮೌಲ್ಯದ ಸಾಲವನ್ನು ವಜಾ ಮಾಡಿದ್ದವು. ಕಳೆದ ಐದು ವರ್ಷಗಳಲ್ಲಿ ಈ ಮೊತ್ತ ಮೂರು ಪಟ್ಟು ಹೆಚ್ಚಾಗಿದೆ. ಸಾರ್ವಜನಿಕ ಬ್ಯಾಂಕುಗಳು 2013-14ರಲ್ಲಿ 344.09 ಶತಕೋಟಿ, 2014-15ರಲ್ಲಿ 490.18 ಶತಕೋಟಿ,  2015-16ರಲ್ಲಿ 575.85 ಶತಕೋಟಿ ರೂ ಸಾಲ ವಜಾ ಮಾಡಿದ್ದು ಕಳೆದ ವರ್ಷ 803..83 ಶತಕೋಟಿ ರೂ ವಜಾ ಮಾಡಿವೆ.

ಎಸ್‍ಬಿಐ ಹೊರತುಪಡಿಸಿ 2016-17ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ 92.05 ಶತಕೋಟಿ, ಬ್ಯಾಂಕ್ ಆಫ್ ಇಂಡಿಯಾ 73.46 ಶತಕೋಟಿ, ಕೆನರಾ ಬ್ಯಾಂಕ್ 55.45 ಶತಕೋಟಿ, ಬ್ಯಾಂಕ್ ಆಫ್ ಬರೋಡ 43.48 ಶತಕೋಟಿ ರೂ ಸಾಲ ವಜಾ ಮಾಡಿವೆ.

ಪ್ರಸಕ್ತ  ಹಣಕಾಸು ವರ್ಷದ ಆರು ತಿಂಗಳ ಅವಧಿಯಲ್ಲಿ ಸಾರ್ವಜನಿಕ ಬ್ಯಾಂಕುಗಳು  536.25 ಶತಕೋಟಿ ರೂ ಮೌಲ್ಯದ ಸಾಲಗಳನ್ನು ವಜಾ ಮಾಡಿವೆ. ಆರ್‍ಬಿಐ ಮಾಹಿತಿಯ ಅನುಸಾರ 21 ಸಾರ್ವಜನಿಕ ಬ್ಯಾಂಕುಗಳ ಪೈಕಿ ಒಂಭತ್ತು ಬ್ಯಾಂಕುಗಳಲ್ಲಿ ಮರುಪಾವತಿಯಾಗದ ಸಾಲಗಳ ಅನುಪಾತ ಶೇ 15ಕ್ಕಿಂತಲೂ ಹೆಚ್ಚಾಗಿದೆ.  ಹದಿನಾಲ್ಕು ಬ್ಯಾಂಕುಗಳಲ್ಲಿ ಈ ಪ್ರಮಾಣ ಶೇ 12ಕ್ಕಿಂತಲೂ ಹೆಚ್ಚಾಗಿದೆ.

 

LEAVE A REPLY