ಕಪ್ಪು ಹಣ ಠೇವಣಿಗೆ 2000 ಹೊಸ ಖಾತೆ ತೆರೆದ ಎಸ್ಬಿಐ ಬರೇಲಿ ಶಾಖೆ !

ಬರೇಲಿ : ಉತ್ತರ ಪ್ರದೇಶದ ಬರೇಲಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯೊಂದು ನೋಟು ಅಮಾನ್ಯೀಕರಣದ ನಂತರ, ಡಿಸೆಂಬರ್ 31ರವರೆಗೆ ಕಪ್ಪು ಹಣ ಠೇವಣಿಗೆ ದಾರಿ ಮಾಡಿಕೊಡಲೆಂದೇ 2,000ಕ್ಕೂ ಮಿಕ್ಕಿ ಹೊಸ ಖಾತೆಗಳನ್ನು ತೆರೆದಿದೆಯೆಂದು ಸಿಬಿಐ ತನಿಖೆಯಿಂದ ತಿಳಿದುಬಂದಿದೆ. ಈ ಖಾತೆಗಳಲ್ಲಿ ಠೇವಣಿಯಿಡಲಾದ ಹಣದಲ್ಲಿ ಕನಿಷ್ಠ ರೂ 8 ಕೋಟಿ ಅಮಾನ್ಯೀಕರಣಗೊಂಡ ನೋಟುಗಳ ರೂಪದಲ್ಲಿ ಬಂದಿತ್ತೆಂದೂ ಬಹಿರಂಗಗೊಂಡಿದೆ. ಇದರ ಹೊರತಾಗಿ ಹಲವಾರು ಸಮಯದಿಂದ ಬಳಕೆಯಲ್ಲಿಲ್ಲದೇ ಇರದ ಸುಮಾರು 267 ಖಾತೆಗಳನ್ನೂ ಸಕ್ರಿಯಗೊಳಿಸಿ ಅಮಾನ್ಯಗೊಂಡ ನೋಟುಗಳ ಠೇವಣಿಗಾಗಿ ಉಪಯೋಗಿಸಲಾಗಿದೆ ಎಂದು ತನಿಖೆ ಕಂಡುಕೊಂಡಿದೆ.