ಡಿವೈಎಫೈನಿಂದ `ಪಲ್ಗುಣಿ ಉಳಿಸಿ ಅಭಿಯಾನ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪಲ್ಗುಣಿ ನದಿ ಮಾಲಿನ್ಯಗೊಳಿಸುತ್ತಿರುವ ಎಂಆರ್ಪಿಎಲ್, ಎಸ್ಸಿಝೆಡ್, ಅದಾನಿ ಕಂಪೆನಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹಾಗೂ ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ ಬೇಜವಾಬ್ದಾರಿತನದ ವಿರುದ್ಧ ಪ್ರತಿಭಟನೆ `ಪಲ್ಗುಣಿ ಉಳಿಸಿ ಅಭಿಯಾನ’ ಡಿವೈಎಫೈ ನೇತೃತ್ವದಲ್ಲಿ ಬೈಕಂಪಾಡಿಯಲ್ಲಿ ನಡೆಯಿತು.

“ಇಲ್ಲಿನ ಜನಜೀವನದ ಬದುಕನ್ನೇ ಬರ್ಬರ ಮಾಡಿರುವ ಬೃಹತ್ ಕಂಪೆನಿಗಳು ದಾಂಗುಡಿ ಇಡುವ ಸಂದರ್ಭದಲ್ಲಿಯೇ ನಾವು ಇದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದೆವು. ಹೀಗಿದ್ದರೂ ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಈ ಎಲ್ಲಾ ಕಂಪೆನಿಗಳಿಗೆ ಕೆಂಪುಹಾಸು ಹಾಕಿತು. ಇದೀಗ ಅದರ ಫಲವನ್ನು ಜಿಲ್ಲೆಯ ಜನತೆ ಅನುಭವಿಸುವಂತಾಗಿದೆ. ಡ್ಯಾಂನಲ್ಲಿ ನಡೆದಿರುವ ಜಲಚರಗಳ ಮಾರಣಹೋಮಕ್ಕೆ ಕಾರಣವಾಗಿರುವ ಬೃಹತ್ ಕಂಪೆನಿಗಳಿಗೆ ಕೂಡಲೇ ಬೀಗ ಹಾಕಬೇಕು” ಎಂದು ಸಂಘಟನೆ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದರು.

62ನೇ ತೋಕೂರು ಗ್ರಾ ಪಂ ಅಧ್ಯಕ್ಷೆ ಪ್ರೆಸಿಲ್ಲ ಡಿಸೋಜ, ಕಾಪೆರ್Çರೇಟರ್ ದಯಾನಂದ ಶೆಟ್ಟಿ ಕಂಪೆನಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಗ್ರಾ ಪಂ ಸದಸ್ಯ ಅಬೂಬಕ್ಕರ್ ಬಾವಾ, ಕ್ಲೆವಿನ್, ಮುಖಂಡರಾದ ಅಜ್ಮಲ್ ಅಹ್ಮದ್, ಶ್ರೀನಾಥ್ ಕಾಟಿಪಳ್ಳ, ಸಾದಿಕ್ ಕಣ್ಣೂರು ಹಾಜರಿದ್ದರು. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಾಸ್ತಾವಿಸಿದರು.