ಬಿಡುಗಡೆ ಮುನ್ನವೇ 2 ಕೋಟಿ ರೂ ಸಂಪಾದಿಸಿದ ಸತ್ಯ ಹರಿಶ್ಚಂದ್ರ

ಶರಣ್ ಪ್ರಮುಖ ಭೂಮಿಕೆಯಲ್ಲಿರುವ `ಸತ್ಯ ಹರಿಶ್ಚಂದ್ರ’ ಚಿತ್ರ ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗುತ್ತಿದ್ದು ಬಿಡುಗಡೆಗೂ ಮುನ್ನವೇ 2 ಕೋಟಿ ರೂ ಸಂಪಾದಿಸಿದೆ. ಟಿವಿ ರೈಟ್ಸ್‍ನಿಂದ 1.80 ಕೋಟಿ ರೂ, ಆಡಿಯೋದಿಂದ 15 ಲಕ್ಷ ರೂ ಹಾಗೂ ಹಿಂದಿ ಡಬ್ಬಿಂಗಿನಿಂದ ಮೂವತ್ತು ಲಕ್ಷ ರೂ ಬಂದಿದೆಯಂತೆ.

ಈ ಸಿನಿಮಾದ ನಿರ್ಮಾಪಕ ಕೆ. ಮಂಜು ತಮ್ಮ ಹಿಂದಿನ ಚಿತ್ರ `ಸ್ಮೈಲ್ ಪ್ಲೀಸ್’ನಲ್ಲಿ ಸುಮಾರು ಎರಡೂವರೆ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದರಂತೆ. ಹಾಗಾಗಿ ಈ ಹೊಸ ಚಿತ್ರ `ಸತ್ಯ ಹರಿಶ್ಚಂದ್ರ’ ಬಿಡುಗಡೆಯಾಗುವುದಕ್ಕಿಂತ ಮುನ್ನವೇ 2ಕೋಟಿ ರೂಗೂ ಅಧಿಕ ಗಳಿಸಿ ಹಾಕಿದ ದುಡ್ಡಿಗೆ ಮೋಸವಿಲ್ಲ ಎನ್ನುವ ಖುಶಿಯಲ್ಲಿದ್ದಾರೆ ಮಂಜು. ಚಿತ್ರ ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಜನ ಖುಷಿಯಿಂದ ಈ ಸಿನಿಮಾವನ್ನು ಸ್ವೀಕರಿಸುತ್ತಾರೆಂಬ ನಂಬಿಕೆ ಮಂಜುಗಿದೆ. ಈ ಸಿನಿಮಾವನ್ನು ದಯಾಲ್ ಪದ್ಮನಾಭನ್ ನಿರ್ದೇಶಿಸಿದ್ದು ಚಿತ್ರದಲ್ಲಿ ಶರಣ್ ಜೊತೆಗೆ ಚಿಕ್ಕಣ್ಣ, ಭಾವನಾ ರಾವ್ ಸಾಧು ಕೋಕಿಲ ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ.