ಗಂಧದ ಕೊರಡು ಕಳವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮುಡಿಪು ಬಳಿ ಇರುವ ಜನಶಿಕ್ಷಣ ಟ್ರಸ್ಟ್ ಆವರಣದೊಳಗೆ ಬೆಳೆದಿದ್ದ ಗಂಧದ ಕೊರಡನ್ನು ಕಳವುಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಎರಡು ದಿನಗಳ ಹಿಂದೆ ರಾತ್ರಿ ವೇಳೆಯಲ್ಲಿ ಯಾರ ಗಮನಕ್ಕೂ ಬಾರದಂತೆ ಮರದ ದಿಮ್ಮಿಗಳನ್ನು ಕಳವು ಮಾಡಲಾಗಿದೆ. ಬ್ಲೇಡಿನಲ್ಲಿ ತುಂಡರಿಸಿದ ರೀತಿಯಲ್ಲಿ ಇವುಗಳನ್ನು ಕಳವು ಮಾಡಲಾಗಿದೆ. ಮರ ತುಂಡರಿಸಲು ಬಳಸುವ ಬ್ಲೇಡನ್ನು ಕೂಡಾ ಇಲ್ಲೇ ಬಿಟ್ಟು ಹೋಗಿದ್ದಾರೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.