ಶ್ರೀಗಂಧದ ಕೊರಡು ಕಳವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹೊಯಿಗೆ ಬಜಾರ್ ಎಂಬಲ್ಲಿರುವ ವಲಯ ಅರಣ್ಯಾಧಿಕಾರಿ ಕಚೇರಿಯ ಎದುರಿನ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಒಳಪ್ರವೇಶಿಸಿ ಗೋಡೌನಲ್ಲಿ ಮರದ ಸೆಲ್ಫಿನಲ್ಲಿರಿಸಿದ್ದ ಸುಮಾರು 15 ಪ್ರಕರಣಗಳಿಗೆ ಸಂಬಂಧಪಟ್ಟ 325 ಕೇಜಿ ತೂಕದ ಶ್ರೀಗಂಧದ ಕೊರಡು ಮತ್ತು ಚೆಕ್ಕೆಗಳನ್ನು ಕಳವು ಮಾಡಲಾಗಿದೆ.

ಮಂಗಳೂರು ಕೇಂದ್ರ ಸ್ಥಾನದ ಉಪವಲಯ ಅರಣ್ಯಾಧಿಕಾರಿ ಎಂ ವೆಂಕಟೇಶ್ವರ ಈ ಕುರಿತು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.