150 ಸಿನಿಮಾಗಳ ಸರದಾರ ಅರ್ಜುನ್ ಸರ್ಜಾ

ಎವರ್ ಗ್ರೀನ್ ನಟ ಅರ್ಜುನ್ ಸರ್ಜಾ ಈಗ 150 ಸಿನಿಮಾಗಳ ಸರದಾರ. ಕಳೆದ ನಾಲ್ಕು ದಶಕಗಳಿಂದ ಅರ್ಜುನ್ ಸರ್ಜಾ ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದು ಈಗ ಅವರು 150ನೇ ಮೈಲಿಗಲ್ಲು ದಾಟುತ್ತಿದ್ದಾರೆ. ಅವರ 150ನೇ ಸಿನಿಮಾದ ಟೈಟಲ್ `ವಿಸ್ಮಯ’ ಎಂದಾಗಿದ್ದು ಈ ಚಿತ್ರದ ಟೀಸರನ್ನು ಮೊನ್ನೆಯಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಬಿಡುಗಡೆ ಮಾಡಿದ್ದಾರೆ.

ಈ ಸಿನಿಮಾ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಕನ್ನಡದಲ್ಲಿ ಈ ಚಿತ್ರದ ಹೆಸರು `ವಿಸ್ಮಯ’ ಎಂದಾಗಿದ್ದರೆ ತಮಿಳಿನಲ್ಲಿ `ನಿಬುನಾನ್’ ಎಂಬ ಶೀರ್ಷಿಕೆ ಇದು ಹೊಂದಿದೆ. ಅರುಣ್ ವೈದ್ಯನಾಥನ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಶ್ರುತಿ ಹರಿಹರನ್ ಹಿರೋಯಿನ್. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾವಸ್ತು ಹೊಂದಿದ್ದು ಪ್ರೇಕ್ಷಕರಲ್ಲಿ ಈಗಲೇ ಕುತೂಹಲ ಕೆರಳಿಸುವಂತಿದೆ.

ಅರ್ಜುನ್ ಇದಲ್ಲದೇ ಕುಮಾರಸ್ವಾಮಿ ಜೀವನಾಧರಿತ `ಭೂಮಿ ಪುತ್ರ’ ಚಿತ್ರದಲ್ಲೂ ನಟಿಸಲಿದ್ದಾರೆ. ಜೊತೆಗೇ ಮಗಳು ಐಶ್ವರ್ಯಾ ಅಭಿನಯದ `ಪ್ರೇಮ ಬರಹ’ ಚಿತ್ರ ತಯಾರಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.