ಅಕ್ರಮ ಮರಳು ಸಾಗಾಟ ಲಾರಿ ಅಧಿಕಾರಿ ವಶಕ್ಕೆ

ವಶಪಡಿಸಿಕೊಂಡ ಅಕ್ರಮ ಮರಳು ಸಾಗಾಟದ ಲಾರಿ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಅಕ್ರಮ ಮರಳು ಸಾಗಾಟದ ಲಾರಿಯನ್ನು ಬಂಟ್ವಾಳ ತಹಶೀಲ್ದಾರ್ ನೇತೃತ್ವದ ಕಂದಾಯ ಇಲಾಖಾಧಿಕಾರಿಗಳು ವಶಕ್ಕೆ ಪಡೆದುಕೊಂಡು ಆರೋಪಿ ಲಾರಿ ಚಾಲಕನನ್ನು ದಸ್ತಗಿರಿ ಮಾಡಿದ ಘಟನೆ ತಾಲೂಕಿನ ಫರಂಗಿಫೇಟೆ ಎಂಬಲ್ಲಿ ಬುಧವಾರ ನಡೆದಿದೆ.

ಬಂಧಿತ ಲಾರಿ ಚಾಲಕನನ್ನು ಪುತ್ತೂರು ತಾಲೂಕಿನ ಹಿರೇಬಂಡಾಡಿ-ಬಾಳೆಹಿತ್ಲು ಮನೆ ನಿವಾಸಿ ಮುಹಮ್ಮದ್ ಹಾಜಿ ಎಂಬವರ ಪುತ್ರ ಕಾಸಿಂ (38) ಎಂದು ಹೆಸರಿಸಲಾಗಿದೆ. ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಮಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ವೇಳೆ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ಟಿಪ್ಪರ್ ಲಾರಿಯಲ್ಲಿ ಅಕ್ರಮ ಮರಳು ಸಾಗಾಟ ನಡೆಸುವುರುವುದನ್ನು ಕಂಡು ಈ ಕಾರ್ಯಾಚರಣೆ ನಡೆಸಿ ಲಾರಿ ಸಹಿತ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.

ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.