ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿ ಸಹಿತ ಚಾಲಕ ಬಂಧನ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯೊಂದನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಲಾರಿ ಚಾಲಕನನ್ನು ಬಂಧಿಸಿದ್ದಾರೆ. ಈ ಸಂದರ್ಭ ಲಾರಿಯಲ್ಲಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ.

ಸೋಮವಾರ 34ನೇ ನೆಕ್ಕಿಲಾಡಿ ಜಂಕ್ಷನ್ನಿನಲ್ಲಿ ಮರಳು ಸಾಗಾಟ ಲಾರಿಯನ್ನು ತಡೆದ ಉಪ್ಪಿನಂಗಡಿ ಪೊಲೀಸರು ತಪಾಸಣೆ ನಡೆಸಿದ್ದು, ಈ ಸಂದರ್ಭ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿರುವುದು ಕಂಡುಬಂತು. ಲಾರಿಯನ್ನು ವಶಪಡಿಸಿಕೊಂಡ ಪೊಲೀಸರು ಲಾರಿ ಚಾಲಕ ಶಾಫಿ ಎಂಬಾತನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂದರ್ಭ ಲಾರಿಯಲ್ಲಿದ್ದ ಹನೀಫ್ ಹಾಗೂ ಲಾರಿ ಮಾಲಕ ಪರಾರಿಯಾಗಿದ್ದಾರೆ. ಈ ಲಾರಿ ತುಂಬೆ ಕಡೆಯಿಂದ ಬೆಂಗಳೂರು ಕಡೆಗೆ ಮರಳು ಸಾಗಾಟ ನಡೆಸುತ್ತಿತ್ತು  ಎನ್ನಲಾಗಿದೆ.