ಅಕ್ರಮ ಸಾಗಾಟದ ಮರಳು ವಶಕ್ಕೆ : ಚಾಲಕ ಪರಾರಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ಮಂಜೇಶ್ವರ ಪೆÇಲೀಸರು ಮೇಲಂಗಡಿಯಿಂದ ವಶಪಡಿಸಿಕೊಂಡಿದ್ದಾರೆ. ಆದರೆ ವಾಹನ ಚಾಲಕ ಪರಾರಿಯಾಗಿದ್ದು, ಪಿಕಪ್ ವಾಹನ ವಶಪಡಿಸಿರುವ ಪೆÇಲೀಸರು ಮರಳನ್ನು ಮುಟ್ಟುಗೋಲು ಹಾಕಿಕೊಂಡರು.


ಅನೈತಿಕ ಅಡ್ಡೆಗೆ ದಾಳಿ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾಂಞಂಗಾಡಿನ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಕೇಂದ್ರಕ್ಕೆ ದಾಳಿ ನಡೆಸಿದ ಪೆÇಲೀಸರು ಆಲಪ್ಪುಳ ಮಹಮ್ಮ ನಿವಾಸಿ ಫಸಲ್ ಕುಮಾರ್ ಯಾನೆ ಮೊಹಮ್ಮದ್ ಶರೀಫ(29)ನನ್ನು ಬಂಧಿಸಿದ್ದಾರೆ.

ಇದೇ ಸಂದರ್ಭ ಮೂವರು ಮಹಿಳೆಯರು ಪರಾರಿಯಾಗಿದ್ದಾರೆ. ಜಮೀಲ, ಉಮೈಬ, ಜೈನಬಿ ಪರಾರಿಯಾದ ಮಹಿಳೆಯರೆಂದು ಪೆÇಲೀಸರು ತಿಳಿಸಿದ್ದಾರೆ.