ಅನಧಿಕೃತ ಮರಳು ಸಾಗಾಟ, 6 ಲಾರಿ ವಶ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ಮತ್ತು ಕುಂಬಳೆ ಪೆÇಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಆರು ಲೋಡ್ ಅಕ್ರಮ ಮರಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಆರು ಮಂದಿ ಚಾಲಕರನ್ನು ಬಂಧಿಸಲಾಗಿದೆ. ಕುಂಬಳೆ ಮತ್ತು ಪೆರುವಾಡಿನಲ್ಲಿ ಕುಂಬಳೆ ಪೆÇಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮೂರು ಲಾರಿ ಮತ್ತು ಮರಳು ವಶಪಡಿಸಲಾಯಿತು. ಮಂಜೇಶ್ವರ ಪೆÇಲೀಸ್ ತಂಡ ಉಪ್ಪಳ ಹಾಗು ಹೊಸಂಗಡಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂರು ಲೋಡ್ ಮರಳು ಮತ್ತು ಲಾರಿ ವಶಪಡಿಸಲಾಯಿತು.