ಅಕ್ರಮ ಮರಳು ಸಾಗಾಟದ 2 ಲಾರಿ ಸಹಿತ ಇಬ್ಬರ ಬಂಧನ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಮಂಜೇಶ್ವರ ಪೆÇಲೀಸರು ವಶಪಡಿಸಿ ಇಬ್ಬರನ್ನು ಸೆರೆಹಿಡಿದಿದ್ದಾರೆ.

ಮಂಗಳೂರು ಕಡೆಯಿಂದ ಕಾಸರಗೋಡಿನತ್ತ ತೆರಳುತ್ತಿದ್ದ ಎರಡು ಮರಳು ಲಾರಿಗಳನ್ನು ಕುಂಜತ್ತೂರಿನಿಂದ ವಶಪಡಿಲಾಗಿದೆ. ಈ ಸಂಬಂಧ ಚಾಲಕರಾದ ಕರ್ನಾಟಕದ ಬೂಲೆಪುರಿ ನಿವಾಸಿ ಅಬ್ದುಲ್ ರಹಿಮಾನ್ (32), ಕುರುಹಳ್ಳಿ ನಿವಾಸಿ ಅಬ್ದುಲ್ ರಹಿಮಾನ್ (30) ಎಂಬವರನ್ನು ಬಂಧಿಸಲಾಗಿದೆ.