`ವಲ್ರ್ಡ್ ಮೆಂಟಲ್ ಡೇ’ ಅಂಗವಾಗಿ ಬೀಚಿನಲ್ಲಿ ಮೂಡಿದ ಮರಳು ಶಿಲ್ಪ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಇಂದಿನ ಯುವ ಪೀಳಿಗೆ ಮಾದಕ ದ್ರವ್ಯಗಳ ಚಟಕ್ಕೆ ಬಲಿಯಾಗಿ ಹುಚ್ಚರಾಗಿ ರೂಪುಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ, ಎಸ್ ಜೆ ಎಸ್ ಸಂಸ್ಥೆಯ ಯುವಕರ ತಂಡವೊಂದು ಮಾದಕ ದ್ರವ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಸಂದೇಶ ಸಾರುವ ಮರಳು ಶಿಲ್ಪವನ್ನು ಪಡುಬಿದ್ರಿ ಬೀಚಿನಲ್ಲಿ ರಚಿಸುವ ಮೂಲಕ ಜನರ ಆಕರ್ಷಣೆಯ ಬಿಂದುವಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಪ್ರದೇಶದ ಜಿ ಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, “ಪೊಲೀಸರಿಗೂ ಸವಾಲಾಗುತ್ತಿರುವ ಈ ಮಾದಕ ದ್ರವ್ಯ ಮಾರಾಟ ಹಾಗೂ ಸೇವನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪಡುಬಿದ್ರಿ ಎಸ್ ಜೆ ಎಸ್ ಸಂಸ್ಥೆಯ ಯುವಕರ ಕಾರ್ಯ ಶ್ಲಾಘನೀಯ, ಮಾದಕ ದ್ರವ್ಯಗಳಿಗೆ ಯುವ ಪೀಳಿಗೆ ಬಲಿಯಾಗುತ್ತಿರುವುದು ನಮ್ಮ ದೇಶದ ಬಲುದೊಡ್ಡ ದುರಂತ, ಅದರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಲು ಅದೇ ಯುವ ಪೀಳಿಗೆ ಮುಂದಾಗಿರುವುದು ಸಂತಸ ತಂದಿದೆ. ಯುವಕರು ಮಾದಕ ದ್ರವ್ಯ ಸೇವನೆಯಿಂದ ದೂರವಾಗಿ ಇಂಥಹ ಸಮಾಜಕ್ಕೆ ಸಂದೇಶ ಸಾರುವ ಕಲೆಗಳನ್ನು ಕಲಿತು ಆ ಮೂಲಕ ಸಮಾಜಸೇವೆ ನಡೆಸುವಂತಾಗಬೇಕು” ಎಂದರು.