ಮಹಿಳಾ ಐಎಎಸ್ ಅಧಿಕಾರಿಗೆ ಮರಳು ಮಾಫಿಯಾ ಬೆದರಿಕೆ

ಬೋಪಾಲ : ಮರಳು ಮಾಫಿಯಾದವರಿಂದ ತನ್ನ ಜೀವಕ್ಕೆ ಅಪಾಯವಿದೆ ಎಂದು ದೂರಿರುವ ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯಲ್ಲಿ ಕರ್ತವ್ಯನಿರತ ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇಲ್ಲಿನ ಛಾತರ್ಪುರ ಜೈಲಿನಲ್ಲಿ ಬಂಧಿಯಾಗಿರುವ ಕೈದಿ ಅರ್ಜುನ್ ಸಿಂಗ್ ಬುಂದೇಲನಿಂದ ತನ್ನ ಜೀವಕ್ಕೆ ಅಪಾಯವಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೋನಿಯಾ ಮೀನಾ ಆರೋಪಿಸಿ ರಾಜ್ಯ ಕಾರ್ಯದರ್ಶಿ ಬಿ ಪಿ ಸಿಂಗ್‍ಗೆ ದೂರು ನೀಡಿದ್ದರು. ಛಾತರ್ಪುರ ಜಿಲ್ಲೆಯ ರಾಜ್‍ನಗರ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಮಾಫಿಯಾದ ವಿರುದ್ಧ ಈಕೆ ಸೀಎಂ ಶಿವರಾಜ್ ಸಿಂಗ್ ಚೌವಾಣ್ ನಿರ್ದೇಶನದಂತೆ ಕ್ರಮ ಕೈಗೊಂಡ ಬಳಿಕವೇ ಸೋನಿಯಾಗೆ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿವೆ.