ಅಪಹರಣಕ್ಕೀಡಾದ ಮರಳು ಲಾರಿ ಪತ್ತೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ತಂಡವೊಂದು ಅಪಹರಿಸಿದ ಕರ್ನಾಟಕದಿಂದ ಮರಳು ಹೇರಿ ಸಾಗುತ್ತಿದ್ದ ಲಾರಿಯನ್ನು ನಾಯ್ಕಾಪು ಬಳಿಯಿಂದ ಪೆÇಲೀಸರು ಪತ್ತೆಹಚ್ಚಿ ವಶಪಡಿಸಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲು ಸಾಧ್ಯವಾಗಬಹುದೆಂದು ಪೆÇಲೀಸರು ತಿಳಿಸಿದ್ದಾರೆ.

ಕರ್ನಾಟಕದಿಂದ ಮರಳು ಸಾಗಿಸುತ್ತಿದ್ದ ಟೋರಸ್ ಲಾರಿಯನ್ನು ಆಲ್ಟೋ ಕಾರಿನಲ್ಲಿ ಬಂದ ತಂಡವೊಂದು ಮಂಗಳವಾರ ಬೆಳಿಗ್ಗೆ ನಾಯ್ಕಾಪಿನಲ್ಲಿ ತಡೆದು ನಿಲ್ಲಿಸಿ ಚಾಲಕ ಮತ್ತು ಕ್ಲೀನರನಲ್ಲಿ 60 ಸಾವಿರ ರೂ ನೀಡುವಂತೆ ಬೆದರಿಕೆಯೊಡ್ಡಿ ಅಪಹರಿಸಿತ್ತು.