ಅಕ್ರಮ ಮರಳು ಲಾರಿ ವಶ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಶಿರ್ವ ವ್ಯಾಪ್ತಿಯ ಕುರ್ಕಾಲು ಗ್ರಾಮ ಪಂಚಾಯಿತಿ ಸದಸ್ಯ ನಾಗೇಂದ್ರ ಮುಂದಾಳ್ವದಲ್ಲಿ ಮರಳು ಲಾರಿಗಳನ್ನು ತಡೆದು ಪೊಲೀಸರ ಸಹಕಾರದಿಂದ ಲಾರಿಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಾರೀ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಕಾರ್ಯಾಚರಣೆಗಿಳಿದ ಗ್ರಾ ಪಂ ಸದಸ್ಯರ ನೇತೃತ್ವದ ಸಾರ್ವಜನಿಕರ ತಂಡ ಲಾರಿಗಳನ್ನು ತಡೆದಿದ್ದು ಮಾತುಕತೆ ನಡೆಸಿದೆ. ಈ ಸಂದರ್ಭ ಲಾರಿ ಚಾಲಕ ಲಾರಿಗಳು ಲೋಕೋಪಯೋಗಿ ಇಲಾಖೆಗೆ ಸೇರಿದ್ದು ಎಂಬುದಾಗಿ ಸ್ಪಷ್ಟೀಕರಣ ನೀಡಿದ್ದರಿಂದ ಸ್ಥಳಕ್ಕೆ ಶಿರ್ವ ಪೊಲೀಸರನ್ನು ಕರೆಸಿ ತನಿಖೆಗೆ ಆಗ್ರಹಿಸಿದ್ದಾರೆ. ಲಾರಿಗಳು ನಿಟ್ಟೆ ಬಿ ಕೆ ಅಶೋಕ್ ಅವರಿಗೆ ಸೇರಿದ್ದು ಎನ್ನಲಾಗಿದೆ.