ಅಕ್ರಮ ಮರಳು ಸಾಗಾಟದ ಲಾರಿ ಚಾಲಕ ಪೆÇಲೀಸರ ಕಂಡು ಓಡುವಾಗ ಬಾವಿಗೆ ಬಿದ್ದ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಪೆÇಲೀಸರು ನಿಲ್ಲಿಸಿದಾಗ ಅದರ ಚಾಲಕ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ವೇಳೆ ಬಾವಿಗೆ ಬಿದ್ದಿದ್ದಾನೆ.

ತೆಕ್ಕಿಲ್ ಗ್ರಾಮದ ಬೆಂಡಿಚ್ಚಾಲ್ ಅಬ್ದುಲ್ ನಸರ್ (36) ಬಾವಿಗೆ ಬಿದ್ದ ಲಾರಿ ಚಾಲಕನಾಗಿದ್ದಾನೆ. ವಿದ್ಯಾನಗರ ಪೆÇಲೀಸರು ಬೇವಿಂಜೆಯಲ್ಲ ಗಸ್ತು ತಿರುಗುತ್ತಿದ್ದ ವೇಳೆ ಆ ದಾರಿಯಾಗಿ ಅಕ್ರಮವಾಗಿ ಮರಳನ್ನು ಹೇರಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿಯನ್ನು ತಡೆದು ನಿಲ್ಲಿಸಿದಾಗ ಚಾಲಕ ಲಾರಿಯಿಂದ ಜಿಗಿದು ಪರಾರಿಯಾಗುವ ವೇಳೆ ಅಲ್ಲೇ ಪಕ್ಕದ ಮನೆಯೊಂದರ ಬಳಿಯ ಆವರಣ ಗೋಡೆಯಿಲ್ಲದ ಬಾವಿಗೆ ಬದ್ದಿದ್ದಾನೆ.

ಬಳಿಕ ಪೆÇಲೀಸರು ಅಗ್ನಿಶಾಮಕದಳದವರನ್ನು ಕರೆಸಿ ಚಾಲಕನನ್ನು ಮೇಲಕ್ಕೆತ್ತಿ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಯಾವುದೇ ಗಾಯಗಳಿಲ್ಲದ ಕಾರಣ ಬಳಿಕ ಚಾಲಕನನ್ನು ಬಂಧಿಸಲಾಗಿದೆ. ಅಕ್ರಮ ಮರಳು ಸಾಗಾಟ ಮಾಡಿದ ಚಾಲಕನ ವಿರುದ್ಧವೂ ಅದೇ ರೀತಿ ಹೊಳೆಯಿಂದ ಮರಳು ಸಾಗಿಸಲು ಹಿತ್ತಿಲ ಮೂಲಕ ಅಗತ್ಯದ ದಾರಿ ಸೌಕರ್ಯ ಮಾಡಿಕೊಟ್ಟ ಬೇವಿಂಜೆ ನಿವಾಸಿ ಖಾಸಗಿ ವ್ಯಕ್ತಿಯ ವಿರುದ್ಧವೂ ಪೆÇಲೀಸರು ಕೇಸು ದಾಖಲಿಸಿದ್ದಾರೆ.

LEAVE A REPLY