ಮರಳು ತುಂಬಿದ ಲಾರಿ ಸಹಿತ ಚಾಲಕ, ಕ್ಲೀನರನ ಅಪಹರಿಸಿ ಹಣಕ್ಕಾಗಿ ಬೇಡಿಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮರಳು ಸಾಗಿಸುತ್ತಿದ್ದ ಲಾರಿಯನ್ನು ನಾಲ್ಕು ಮಂದಿಯ ತಂಡ ಅಪಹರಿಸಿ ಅಜ್ಞಾತ ಕೇಂದ್ರಕ್ಕೆ ಕರೆದೊಯ್ದು ಲಾರಿ ಚಾಲಕ ಹಾಗೂ ಕ್ಲೀರನನ್ನು ಸೆರೆಯಲ್ಲಿಟ್ಟಿದ್ದು ಬಿಡುಗಡೆಗಾಗಿ 60,000 ರೂ ಬೇಡಿಕೆಯೊಡ್ಡಿದ ಬಗ್ಗೆ ವರದಿಯಾಗಿದೆ.

ಮಂಗಳವಾರ ಬೆಳಿಗ್ಗೆ 5 ಗಂಟೆ ವೇಳೆ ನಾಯ್ಕಾಪಿನಲ್ಲಿ ಈ ಘಟನೆ ನಡೆದಿದೆ. ನೀರ್ಚಾಲು, ಸೀತಾಂಗೋಳಿ ಮೂಲಕ ಕುಂಬಳೆ ಭಾಗಕ್ಕೆ ಮರಳು ಸಾಗಿಸುತ್ತಿದ್ದ ಟೋರಸ್ ಲಾರಿಯನ್ನು ತಂಡ ಅಪಹರಿಸಿದೆ. ಲಾರಿಯನ್ನು ಕನ್ಯಪ್ಪಾಡಿಯಿಂದಲೇ ನಾಲ್ಕು ಮಂದಿ ತಂಡ ಆಲ್ಟೋ ಕಾರಿನಲ್ಲಿ ಹಿಂಬಾಲಿಸಿದ್ದು, ಲಾರಿ ನಾಯ್ಕಾಪಿಗೆ ತಲುಪಿದಾಗ ಕಾರನ್ನು ಅಡ್ಡನಿಲ್ಲಿಸಿದ ತಂಡ ಬಳಿಕ 60,000 ರೂ ನೀಡಬೇಕೆಂದು ತಿಳಿಸಿದೆ. ಹಣ ಇಲ್ಲವೆಂದು ಚಾಲಕ ತಿಳಿಸಿದಾಗ ತಂಡ ಲಾರಿಯನ್ನು ಅಜ್ಞಾತ ಕೇಂದ್ರಕ್ಕೆ ಕೊಂಡೊಯ್ದು ಚಾಲಕ ಹಾಗೂ ಕ್ಲೀನರನನ್ನು ಒತ್ತೆಸೆರೆಯಲ್ಲಿಟ್ಟಿದೆ. ಬಳಿಕ ಲಾರಿಯ ಮಾಲಕನಾದ ಕರ್ನಾಟಕ ನಿವಾಸಿ ಇಲ್ಯಾಸಗೆ ಫೆÇೀನ್ ಮಾಡಿದ ತಂಡ ಹಣದ ಬೇಡಿಕೆಯಿರಿಸಿದೆ. ಈ ಬಗ್ಗೆ ಲಾರಿಯ ಪಾಲುದಾರನಾದ ಬದ್ರುದ್ದೀನ್ ಬದಿಯಡ್ಕ ಪೆÇಲೀಸರಿಗೆ ದೂರು ನೀಡಿದ್ದಾರೆ. ಘಟನೆ ನಾಯ್ಕಾಪಿನಲ್ಲಿ ನಡೆದ ಹಿನ್ನೆಲೆಯಲ್ಲಿ ಪ್ರಕರಣವನ್ನು ಕುಂಬಳೆ ಪೆÇಲೀಸರಿಗೆ ಹಸ್ತಾಂತರಿಸಲಾಗಿದೆ. ಪೆÇಲೀಸರು ತನಿಖೆ ಆರಂಭಿಸಿದ್ದಾರೆ.