ನೋಡುಗರ ಗಮನ ಸೆಳೆಯುತ್ತಿರುವ ಅರ್ಧನಾರೇಶ್ವರನ ಮರಳಿನ ಮೂರ್ತಿ

ಕುಮಟಾ : ತಾಲೂಕಿನ ಹೊಲನಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಕಡ್ಲೆಯ ಕಡಲತೀರದಲ್ಲಿ ಶಿವರಾತ್ರಿ ಉತ್ಸವದ ಅಂಗವಾಗಿ ದಿ ಭಾಸ್ಕರ ಆಚಾರ್ಯ ಕುಟುಂಬದವರ ಕಲಾಕೃತಿಯಿಂದ ಮೂಡಿಬಂದ 100 ಅಡಿ ಉದ್ದದ ಅರ್ಧನಾರೇಶ್ವರನ ಮರಳಿನ ಮೂರ್ತಿ ನೊಡುಗರ ಗಮನ ಸೆಳೆಯಿತು.
ಕಡ್ಲೆಯ ಕಡಲತೀರದಲ್ಲಿ ಶಿವರಾತ್ರಿ ಉತ್ಸವದ ಅಂಗವಾಗಿ ದಿ ಭಾಸ್ಕರ ಆಚಾರ್ಯ ಹಾಗೂ ದಿ ಮಾರುತಿ ನಾಯ್ಕ ಸ್ಮರಣಾರ್ಥ ಮರಳಿನ ಶಿವನ ಮೂರ್ತಿ ನಿರ್ಮಿಸಲಾಗಿದೆ. ಅಲ್ಲದೇ ಶಿವರಾತ್ರಿಯಲ್ಲಿ 2 ದಿನ ಸಾಂಸ್ಕøತಿಕ ಹಾಗೂ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಶುಕ್ರವಾರ ಸಂಜೆ ಸ್ಥಳೀಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಯಕ್ಷಗಾನ ಮತ್ತು ಗುರುವಾರ ಸಂಜೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. 7ನೇ ವರ್ಷದ ಈ ಕಾರ್ಯಕ್ರಮಕ್ಕೆ ಪುರುಷೋತ್ತಮ ನಾಯ್ಕ ನೇತೃತ್ವದಲ್ಲಿ ಊರಿನ ನಾಗರಿಕರು ಸಹಕರಿಸಿದ್ದಾರೆ.

LEAVE A REPLY