ಗೌರಿ ಕೊಲೆಯಲ್ಲಿ ಸನಾತನ ಸಂಸ್ಥಾ ಪಾತ್ರವಿಲ್ಲ : ವಕ್ತಾರ

ಪಣಜಿ : 2013ರಿಂದಲೂ ಆರೆಸ್ಸೆಸ್, ಗೃಹ ಸಚಿವಾಲಯದ ಮುಖ್ಯ ಗುರಿಯಾಗಿದೆ. ಆದರೆ ಎಡಪಂಥೀಯ ಸಂಘಟನೆಗಳು ಸನಾತನ ಸಂಸ್ಥಾವನ್ನು (ಎಸ್ ಎಸ್) ಗುರಿಯಾಗಿಸಿವೆ ಎಂದು ಗೋವಾ ಮೂಲದ ಹಿಂದೂ ಬಲಪಂಥೀಯ ಸಂಘಟನೆಯಾದ ಎಸ್ಸೆಸ್ಸಿನ ವಕ್ತಾರ ಚೇತನ್ ರಾಜಹಂಸ ತಿಳಿಸಿದರು.

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯಲ್ಲಿ ಎಸ್ ಎಸ್ ಸದಸ್ಯರು ಶಾಮೀಲಾಗಿಲ್ಲ. ಆದರೂ ಗೌರಿ ಪ್ರಕರಣದಲ್ಲಿ ಸಂಸ್ಥಾದ ವಿರುದ್ಧ ವರದಿಗಳು ಪ್ರಕಟಗೊಂಡಿವೆ ಎಂದವರು, ಪ್ರಕರಣದ ತನಿಖೆ ನಡೆಸುತ್ತಿರುವ ಎಸೈಟಿ ಅಧಿಕಾರಿಗಳು ಇದುವರೆಗೆ ಸಂಸ್ಥಾ ಸಾಧಕರನ್ನು ಪ್ರಶ್ನಿಸಿಲ್ಲ ಅಥವಾ ಇಲ್ಲಿಗೆ ಭೇಟಿ ನೀಡಿಲ್ಲ ಎಂದರು. ಎಸ್ ಎಸ್ ವಿರುದ್ಧ “ಇದೊಂದು ಯೋಜನಾಬದ್ಧ ಪಿತೂರಿ” ಎಂದು ಚೇತನ್ ಟೀಕಿಸಿದರು.