`ಕಿರಿಕ್’ ಸಂಯುಕ್ತಾಗೂ ಭಾರೀ ಬೇಡಿಕೆ

`ಕಿರಿಕ್ ಪಾರ್ಟಿ’ ಸಿನಿಮಾದ ಭರ್ಜರಿ ಯಶಸ್ಸಿನಿಂದಾಗಿ ಆ ಚಿತ್ರದ ಹಿರೋಯಿನ್ಸ್ ಇಬ್ಬರಿಗೂ ಈಗ ಸಕತ್ ಡಿಮಾಂಡ್. ಚಿತ್ರದ ಮೊದಲ ಭಾಗದಲ್ಲಿ ಮಿಂಚಿದ್ದ ರಶ್ಮಿಕಾ ಮಂದಣ್ಣ ಈಗಾಗಲೇ ಮೂರ್ನಾಲ್ಕು ಚಿತ್ರಗಳಿಗೆ ಆಯ್ಕೆಯಾಗಿದ್ದರೆ, ಸಿನಿಮಾದ ಇಂಟರ್ವಲ್ ಬಳಿಕ ಬರುವ ತುಂಟ ಹುಡುಗಿ ಸಂಯುಕ್ತ ಹೆಗಡೆಗೂ ಅವಕಾಶಗಳು ಕೈಬೀಸಿ ಕರೆಯುತ್ತಿವೆ. `ಎಂ ಟಿ ವಿ ರೋಡೀಸ್’ ಶೋದಿಂದ ವಾಪಾಸಾಗಿರುವ ಸಂಯುಕ್ತ `ವಾಸು.. ನಾನ್ ಪಕ್ಕಾ ಕಮರ್ಷಿಯಲ್’ ಸಿನೆಮಾದಲ್ಲಿ ನಟಿಸಲು ಈಗಾಗಲೇ ಸಹಿ ಹಾಕಿದ್ದಾಳೆ. ಇದರಲ್ಲಿ ಅನಿಶ್ ತೇಜೇಶ್ವರ್ ಹೀರೋ. ಅದಲ್ಲದೇ `ಕಾಲೇಜ್ ಕುಮಾರ್’ ಸಿನೆಮಾದಲ್ಲಿ ಸಂಯುಕ್ತಾಳೇ ನಾಯಕಿ. ಇದರಲ್ಲಿ `ಕೆಂಡಸಂಪಿಗೆ’ಯ ವಿಕ್ಕಿ ಹೀರೋ. ಈ ಸಿನಿಮಾ ಕಾಲೇಜು ಹುಡುಗ-ಹುಡುಗಿ ಪ್ರೇಮ ಕತೆಯಾಗಿದ್ದು ಮೋಜು ಮಸ್ತಿ ಬೇಕಷ್ಟು ಇರುವುದರಿಂದ ನಾಟಿ ಗರ್ಲ್ ಸಂಯುಕ್ತಾ ಇದಕ್ಕೆ ಸರಿಯಾಗಿ ಹೊಂದಿಕೆಯಾಗುತ್ತಾಳೆ ಎನ್ನುತ್ತಾರೆ ನಿರ್ದೇಶಕ ಸಂತೋಷ್. ಸಿನಿಮಾ ಒಂದೆರಡು ತಿಂಗಳಲ್ಲಿ ಸೆಟ್ಟೇರಲು ತಯಾರಿ ನಡೆಯುತ್ತಿದೆ.