ಟಾಲಿವುಡ್ಡಿನಲ್ಲೂ ಸಂಯುಕ್ತಾ `ಕಿರಿಕ್’

ಸಂಯುಕ್ತಾ ಹೆಗ್ಡೆ ಟಾಲಿವುಡ್ಡಿನಲ್ಲೂ `ಕಿರಿಕ್’ ಮಾಡಲು ಹೊರಟಿದ್ದಾಳೆ. ಹೌದು, ಕನ್ನಡದ ಬ್ಲಾಕ್ ಬಸ್ಟರ್ ಮೂವಿ `ಕಿರಿಕ್ ಪಾರ್ಟಿ’ ಟಾಲಿವುಡ್ಡಿಗೆ ರಿಮೇಕ್ ಆಗುತ್ತಿದ್ದು ಆ ಚಿತ್ರದಲ್ಲೂ ಸಂಯುಕ್ತಾ ಹೆಗ್ಡೆ ನಟಿಸಲಿದ್ದಾಳೆ.

`ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಹೀರೋಯಿನ್ ಆಗಿದ್ದ ರಶ್ಮಿಕಾ ಮಂದಣ್ಣಳಷ್ಟೇ ಗಮನ ಸೆಳೆದ ಹುಡುಗಿ ಚಿತ್ರದ ಎರಡನೇ ನಾಯಕಿ ಸಂಯುಕ್ತಾ. ಆಕೆಯ ಲವಲವಿಕೆಯಿಂದ ಕೂಡಿದ ನಟನೆ ಎಲ್ಲರಿಗೂ ಇಷ್ಟವಾಗಿತ್ತು. ಈಗ ತೆಲುಗಿನಲ್ಲೂ ಆಕೆಗೆ ಆಫರ್ ಬಂದಿದ್ದು ಅಲ್ಲಿಯೂ ತನ್ನ ಜಲ್ವಾ ತೋರಲು ರೆಡಿಯಾಗಿದ್ದಾಳೆ. ಅಂದ ಹಾಗೆ ರಶ್ಮಿಕಾಳೇ ತೆಲುಗಿನಲ್ಲೂ ನಾಯಕಿ. ತೆಲುಗಿನ `ಕಿರಿಕ್ ಪಾರ್ಟಿ’ ಚಿತ್ರವನ್ನು ಶರಣ್ ಕೊಪ್ಪಿಶೆಟ್ಟಿ ನಿರ್ದೇಶಿಸುತ್ತಿದ್ದು, ರಕ್ಷಿತ್ ಶೆಟ್ಟಿ ಮಾಡಿದ ಪಾತ್ರದಲ್ಲಿ ನಿಖಿಲ್ ನಟಿಸುತ್ತಿದ್ದಾನೆ.