ಬೀಚಲ್ಲಿ ಸಲ್ಮಾನ್-ಜಾಕ್ಲಿನ್ ರೊಮ್ಯಾನ್ಸ್

ಸಲ್ಮಾನ್ ಖಾನ್ ಹಾಗೂ ಜಾಕ್ಲಿನ್ ಫೆರ್ನಾಂಡಿಸ್ ಈಗ `ರೇಸ್-3′ ಚಿತ್ರದಲ್ಲಿ ಜೊತೆಯಾಗಿದ್ದು ಅವರ ರೊಮ್ಯಾಂಟಿಕ್ ಸಾಂಗ್ ಒಂದು ಪಟ್ಟಾಯಾ ಬೀಚಿನಲ್ಲಿ ಚಿತ್ರೀಕರಣಗೊಳ್ಳಲಿದೆ.

`ಕಿಕ್’ ಚಿತ್ರದಲ್ಲಿ ಸಲ್ಲು-ಜಾಕ್ ಜೋಡಿಯ `ಜುಮ್ಮೇ ಕಿ ರಾತ್ ಹೈ’ ಹಾಗೂ `ಹ್ಯಾಂಗೋವರ್’ ಹಾಡಿನಲ್ಲಿಯ ಹಾಟ್ ಕೆಮೆಸ್ಟ್ರಿಯನ್ನು ಇಷ್ಟ ಪಟ್ಟಿದ್ದ ಸಿನಿಪ್ರೇಕ್ಷಕರು ಈಗ `ರೇಸ್ 3′ ಚಿತ್ರದಲ್ಲಿಯ ಅವರ ರೊಮ್ಯಾನ್ಸ್ ನೋಡಲು ಕಾತರರಾಗಿದ್ದಾರೆ. ಈಗಾಗಲೇ ಇವರ `ಅಲ್ಲಾ ದುವಾ ಹೈ’ ಎನ್ನುವ ಹಾಡಿನ ಚಿತ್ರೀಕರಣ ನಡೆದಿದೆ. ಈ ಡ್ಯಾನ್ಸಿನಲ್ಲಿ ಜಾಕ್ಲಿನ್ ಸ್ಪೆಷಲ್ ಪೋಲ್ ಡ್ಯಾನ್ಸ್ ಕೂಡಾ ಇದೆ. ಈ ಸಿನಿಮಾದಲ್ಲಿ ಬಾಬ್ಬಿ ಡಿಯೋಲ್, ಡೈಸಿ ಶಾ, ಸಾಕಿಬ್ ಸಾಲಿಮ್, ಅನಿಲ್ ಕಪೂರ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ರೆಮೋ ಡಿ ಸೋಜಾ ನಿರ್ದೇಶಿಸುತ್ತಿರುವ ಈ ಸಿನಿಮಾವನ್ನು ರಮೇಶ್ ತೌರಾನಿ ನಿರ್ಮಿಸುತ್ತಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಬ್ಯಾಂಕಾಕ್ ಹಾಗೂ ಯುಎಇಯಲ್ಲಿ ನಡೆಯಲಿದೆ.

LEAVE A REPLY