ಸಲ್ಮಾನ್ ವರ್ಜಿನ್ ಅಲ್ಲವಂತೆ : ಅರ್ಬಾಜ್

ಬಾಲಿವುಡ್ಡಿನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಫೇಮಸ್ ಆಗಿರುವ ಸಲ್ಮಾನ್ ಖಾನ್ ತಾನಿನ್ನೂ ವರ್ಜಿನ್ ಎಂದು ಕಳೆದ `ಕಾಫಿ ವಿದ್ ಕರಣ್’ ಶೋದಲ್ಲಿ ಹೇಳಿಕೊಂಡಿದ್ದ. ಆದರೆ ಸಲ್ಮಾನ್ ವರ್ಜಿನ್ ಅಲ್ಲ ಎನ್ನುವ ವಿಷಯವನ್ನು ಸಲ್ಲು ಸಹೋದರ ಅರ್ಬಾಜ್ ಖಾನ್ ಈ ಸೀಸನ್ನಿನ `ಕಾಫಿ ವಿದ್ ಕರಣ್’ ಶೋದಲ್ಲಿ ಬಯಲುಗೊಳಿಸಿದ್ದಾನೆ.
ಫಿಲ್ಮ್ ಮೇಕರ್ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಟಾಕ್ ಶೋನ 100ನೇ ಎಪಿಸೋಡಿನಲ್ಲಿ ಸಲ್ಮಾನ್ ಜೊತೆ ಅವನ ಇಬ್ಬರು ಸಹೋದರರಾದ ಅರ್ಬಾಜ್ ಖಾನ್ ಹಾಗೂ ಸೋಹೈಲ್ ಖಾನ್ ಸಹ ಭಾಗವಹಿಸಿದ್ದರು. ಈ ಸಮಯದಲ್ಲಿ ಕರಣ್ ಜೋಹರ್ ಹಲವು ವೈಯಕ್ತಿಕ ಪ್ರಶ್ನೆಗಳನ್ನೂ ಕೇಳಿದ್ದರು. ಅದರಲ್ಲಿಯ ಒಂದು ಪೆÇೀಲಿ ಪ್ರಶ್ನೆಯೆಂದರೆ, ಬಾಲಿವುಡ್ಡಿನ ಯಾವ ವ್ಯಕ್ತಿ ಸೆಕ್ಸ್ ಹಾಗೂ ಜಿಮ್ ಇಲ್ಲದೆ ಒಂದು ತಿಂಗಳೂ ಕೂಡ ಇರಲಾರ ಎಂಬ ಪ್ರಶ್ನೆಗೆ ಅರ್ಬಾಜ್ ಖಾನ್, ಹಿಂದೆ ಮುಂದೆ ಯೋಚಿಸಿದೇ “ಸಲ್ಮಾನ್ ಖಾನ್” ಎಂದಿದ್ದಾನೆ. ಈ ಉತ್ತರದಿಂದ ಸಲ್ಲು ಮುಖ ಕೆಂಪೇರಿದ್ದು ಸುಳ್ಳಲ್ಲ. ಅದೇನೇ ಇರಲಿ, ಸಲ್ಮಾನ್ ಒಳಗುಟ್ಟು ಅವನ ಒಡಹುಟ್ಟಿದವರಿಗೆ ಗೊತ್ತಿಲ್ಲದೇ ಇರುತ್ತಾ…