ಸಾರಾ, ಆಯುಷ್ ಲಾಂಚ್ ಮಾಡಲಿರುವ ಸಲ್ಮಾನ್

ಸಲ್ಮಾನ್ ಖಾನ್ ಹಲವು ನಟ-ನಟಿಯರಿಗೆ ಗಾಡ್ ಫಾದರ್ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದೀಗ ತನ್ನ ಸ್ನೇಹಿತ ಸೈಫ್ ಆಲಿ ಖಾನ್ ಪುತ್ರಿ ಸಾರಾ ಆಲಿ ಖಾನ್ ಹಾಗೂ ತನ್ನ ತಂಗಿ ಅರ್ಪಿತಾ ಪತಿ ಆಯುಷ್ ಶರ್ಮಾರನ್ನು ಬೆಳ್ಳಿ ತೆರೆಗೆ ಪರಿಚಯಿಸಲಿದ್ದಾನೆ ಸಲ್ಮಾನ್.

ಆಯುಷ್ ಶರ್ಮಾನನ್ನು ಲಾಂಚ್ ಮಾಡಲು ಸಲ್ಲು ಇದುವರೆಗೆ ಸರಿಯಾದ ಸ್ಕ್ರಿಪ್ಟ್ ತಲಾಶೆಯಲ್ಲಿದ್ದ. ಈಗ ಪಕ್ಕಾ ಲವ್ ಸ್ಟೋರಿಯೊಂದರ ಮೂಲಕ ಆಯುಷ್ ಬಣ್ಣದ ಲೋಕಕ್ಕೆ ಕಾಲಿಡಲಿದ್ದು ಸೈಫ್ ಪುತ್ರಿಯನ್ನು ಆಯುಷ್ ಜೋಡಿಯಾಗಲು ಸಂಪರ್ಕಿಸಲಾಗಿದೆಯಂತೆ. ಸಾರಾಗೂ ಸ್ಕ್ರಿಪ್ಟ್ ಇಷ್ಟವಾಗಿದ್ದು ಸಹಿ ಹಾಕುವುದು ಮಾತ್ರ ಬಾಕಿ ಎನ್ನಲಾಗಿದೆ.

ಸಾರಾ ಈ ಮೊದಲು ಕರಣ್ ಜೋಹರ್ `ಸ್ಟೂಡೆಂಟ್ ಆಫ್ ದ ಇಯರ್-2′ ಚಿತ್ರದ ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಡುತ್ತಾಳೆ ಎನ್ನುವ ಸುದ್ದಿ ಇತ್ತಾದರೂ ಸಾರಾ ತಾಯಿ ಅಮೃತಾ ಸಿಂಗಗೆ ಅದು ಇಷ್ಟವಿಲ್ಲದ ಕಾರಣ ಅದು ಮುಂದುವರೆದಿರಲಿಲ್ಲ.