ಕನ್ನಡ ಚಿತ್ರದಲ್ಲಿ ಸಾಕ್ಷಿ ಅಗರ್ವಾಲ್

ಎರಡು ವರ್ಷಗಳ ಹಿಂದೆ ಗಾಂಧೀನಗರಕ್ಕೆ ಜಗ್ಗೇಶ್ ಅಭಿನಯದ `ಸಾಫ್ಟ್ ವೇರ್ ಗಂಡ’ ಚಿತ್ರದಲ್ಲಿ ಅಭಿನಯಿಸಲು ಬಂದಿದ್ದ ಕಾಲಿವುಡ್ ಬೆಡಗಿ ಸಾಕ್ಷಿ ಅಗರ್ವಾಲ್ ಇದೀಗ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾಳೆ.

ಆರ್ಯನ್.ಎಂ.ಪ್ರತಾಪ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ `19/11′ ಚಿತ್ರದ `ನಾಜೂಕು ನಲ್ಲೆ… ನಾ ನಡೆಯ ಬಲ್ಲೆ’ ಹಾಡಿಗೆ ಸಾಕ್ಷಿ ಅಗರ್ವಾಲ್ ಹೆಜ್ಜೆ ಹಾಕಿದ್ದಾಳೆ. ಸಾಕ್ಷಿ ಸೊಂಟ ತಿರುಗಿಸಿರುವ ಈ ಹಾಡಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಿದ್ದು ಗಾಯಕಿ ಕಮ್ ನಟಿ ವಸುಂಧರ ದಾಸ್ ಈ ಹಾಡನ್ನು ಹಾಡಿದ್ದಾಳೆ. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು ಮುಂದಿನ ಚಿತ್ರೀಕರಣ ಯೂರೋಪಿನಲ್ಲಿ ನಡೆಯಲಿದೆಯಂತೆ.

ಪೂಜಾ ಲೋಕೇಶ್, ಸಾಕ್ಷಿ ಅಗರ್ವಾಲ್, ಕುಮಾರ್ ಗೋವಿಂದ್, ಸಾಧುಕೋಕಿಲ, ಗಿರಿಜಾ ಲೋಕೇಶ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.