ಮಗನಿಗೆ ಸೈಫೀನಾ ನೀಡಿದ ಗಿಫ್ಟ್ ಬೆಲೆ ಗೊತ್ತಾ…

ಮೊನ್ನೆ ಮಕ್ಕಳ ದಿನಾಚರಣೆಯ ದಿನ ಬಾಲಿವುಡ್ಡಿನ ಲವ್ಲಿ ಕಪಲ್ ಸೈಫ್ ಆಲಿ ಖಾನ್-ಕರೀನಾ ತಮ್ಮ ಮುದ್ದು ಮಗ ತೈಮೂರ್ ಖಾನನಿಗೆ ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ. 1.30 ಕೋಟಿ ರೂ. ಮೌಲ್ಯದ ಕೆಂಪು ಬಣ್ಣದ ಜೀಪ್‍ವೊಂದನ್ನು ಸೈಫ್ ಚೋಟೆ ನವಾಬನಿಗಾಗಿ ಖರೀದಿಸಿದ್ದಾನೆ.

ಮುಂದಿನ ತಿಂಗಳು ಡಿಸೆಂಬರಿನಲ್ಲಿ ತೈಮೂರ್ ತನ್ನ ಮೊದಲ ಬರ್ತ್ ಡೇ ಆಚರಿಸಕೊಳ್ಳಲಿದ್ದಾನೆ. ಅದಕ್ಕೂ ಮೊದಲೇ ಆತ ತನ್ನ ತಂದೆಯಿಂದ 1.30 ಕೋಟಿ ಮೌಲ್ಯದ ಗಿಫ್ಟ್ ಪಡೆದಿದ್ದಾನೆ. ಇದು ತೈಮೂರನಿಗೆ ಸೈಫೀನಾ ಮಕ್ಕಳ ದಿನಾಚರಣೆಗಾಗಿ ನೀಡಿದ ಗಿಫ್ಟ್ ಅಂತೆ. “ಎಲ್ಲಕ್ಕಿಂತ ನನಗೆ ಮಗುವಿನ ಭದ್ರತೆ ಮುಖ್ಯ. ಈ ಜೀಪಿನಲ್ಲಿ ಮಕ್ಕಳಿಗೋಸ್ಕರ ವಿಶೇಷವಾದ ಸೀಟ್ ಅಳವಡಿಸಲಾಗಿದೆ. ಇದು ತುಂಬಾ ಸೇಫ್ ಆಗಿದೆ. ಹಾಗಾಗಿ ಈ ಜೀಪ್ ಖರೀದಿಸಿದ್ದೇನೆ” ಎಂದು ಸೈಫ್ ಹೇಳಿದ್ದಾನೆ.