ಸಹ್ಯಾದ್ರಿ ದಿನಾಚರಣೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಅಪ್ಪಿಕೋ ಚಳುವಳಿ ನಡೆದು ಶುಕ್ರವಾರಕ್ಕೆ 35 ವರ್ಷವಾಗಿದ್ದು, ಅದನ್ನು ಸಹ್ಯಾದ್ರಿ ದಿನವಾಗಿ ಆಚರಿಸಲಾಗುತ್ತಿದೆ. ಈ ಬಾರಿ ಸೆಪ್ಟೆಂಬರ್ 8ರಿಂದ 3 ದಿನ ಕಾಲ ಧಾರವಾಡದಲ್ಲಿ ಸಹ್ಯಾದ್ರಿ ದಿನಾಚರಣೆ ನಡೆಯಲಿದೆ.

ಧಾರವಾಡ ಕೃಷಿ ವಿ ವಿ.ಯಲ್ಲಿ, ವಿದ್ಯಾವರ್ಧಕ ಸಂಘದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಅಲ್ಲಿ ಗಾಯಕರು ಬೇಂದ್ರೆ ಹಾಗೂ ಕುವೆಂಪು ರಚಿತ ಪ್ರಕೃತಿ ಗೀತೆ ಹಾಡಲಿದ್ದಾರೆ. ಮಣ್ಣು-ನೀರು, ಮಣ್ಣು-ಬದುಕು, ಪ್ರಗತಿ ಇವುಗಳ ಬಗ್ಗೆ ಚರ್ಚೆ ಆಗಲಿದೆಯೆಂದು ಸಂಯೋಜಕ ಪರಿಸರ ತಜ್ಞ ಪಾಂಡುರಂಗ ಹೆಗಡೆ ತಿಳಿಸಿದ್ದಾರೆ.