ಸೈನಾ ಜೊತೆ ಶ್ರದ್ಧಾಳ ಬ್ಯಾಡ್ಮಿಂಟನ್ ಪ್ರಾಕ್ಟೀಸ್

ಶ್ರದ್ಧಾ ಕಪೂರ್ ನಟಿಸಿರುವ `ಹಸೀನಾ ಪಾರ್ಕರ್’ ಸಿನಿಮಾ ಇದೇ ತಿಂಗಳು ಅಗಸ್ಟ್ 18ಕ್ಕೆ ರಿಲೀಸ್ ಆಗುತ್ತಿದೆ. ಚಿತ್ರದ ಪ್ರಮೋಶನ್ನಿನ ನಡುವೆಯೇ ಶ್ರದ್ಧಾ ಈಗ ಮುಂದಿನ ಚಿತ್ರಕ್ಕೂ ತಯಾರಾಗುತ್ತಿದ್ದಾಳೆ. ಆಕೆ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ಜೀವನಾಧರಿತ ಸಿನಿಮಾದಲ್ಲಿ ನಟಿಸಲಿದ್ದು ಅದಕ್ಕಾಗಿ ಸಕತ್ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾಳೆ. ಶ್ರದ್ಧಾ ಈಗ ಬ್ಯಾಡ್ಮಿಂಟನ್ ಆಡಲು ಕೋಚ್ ಪುಲ್ಲೇಲಾ ಗೋಪಿಚಂದ್ ಬಳಿ ಟ್ರೈನಿಂಗ್ ಪಡೆಯುತ್ತಿದ್ದಾಳೆ. ವಿಶೇಷವೆಂದರೆ ಈ ಟ್ರೈನಿಂಗ್ ಸೆಶನ್ನಿನಲ್ಲಿ ಸ್ವತಃ ಸೈನಾ ನೆಹ್ವಾಲ್ ಕೂಡಾ ಹಾಜರಿದ್ದು ಆಕೆಯ ಹಾವಭಾವ ಎಲ್ಲವನ್ನೂ ಶ್ರದ್ಧಾ ಕಲಿಯುತ್ತಿದ್ದಾಳೆ. ನೋಡಲೂ ಕೆಲವು ಕೋನದಲ್ಲಿ ಸೈನಾಳನ್ನೇ ಹೋಲುವ ಶ್ರದ್ಧಾ ಆಕೆಯ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲಳು ಎನ್ನುವ ವಿಶ್ವಾಸ ನಿರ್ದೇಶಕರದ್ದು. `ಸ್ಟ್ಯಾನ್ಲೀ ಕೆ ಡಬ್ಬಾ’, `ಹವಾ ಹವಾಯಿ’ ಚಿತ್ರ ನಿರ್ದೇಶಿಸಿದ್ದ ಅಮೋಲ್ ಗುಪ್ತಾ `ಸೈನಾ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಅಂದ ಹಾಗೆ ಶ್ರದ್ಧಾ ಇದಲ್ಲದೇ `ಸಾಹೋ’ ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸಲಿದ್ದು ಆ ಸಿನಿಮಾದಲ್ಲಿ ಆಕೆ ಡಬಲ್ ರೋಲಿನಲ್ಲಿ ತೆರೆಯ ಮೆಲೆ ಬರಲಿದ್ದಾಳೆ. ಆ ಸಿನಿಮಾಗಾಗಿ ತೆಲುಗು ಭಾಷೆಯನ್ನೂ ಕಲಿಯುತ್ತಿದ್ದಾಳೆ ಶ್ರದ್ಧಾ.