ರಣವೀರ್ ಸಿಂಗ್ ಜತೆ ಸಚಿನ್ ಪುತ್ರಿ

ಮುಂಬೈ : ಕ್ರಿಕೆಟ್ ದೇವರು ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಈಗ ಕಾಲೇಜಿಗೆ ಹೋಗುವ ಹುಡುಗಿ. ಅಪ್ಪ ಅಷ್ಟು ದೊಡ್ಡ ಸೆಲೆಬ್ರಿಟಿ ಆದರೂ ಎಲ್ಲಾ ಟೀನೇಜ್ ಹುಡುಗಿಯರಂತೆ ಸಿನಿಮಾ ಸ್ಟಾರ್ಸ್ ಜೊತೆ ಫೋಸು ಕೊಡುವುದೆಂದರೆ ಅವಳಿಗೂ ಕ್ರೇಜ್ ಇದ್ದ ಹಾಗಿದೆ.

ಪಾರ್ಟಿಯೊಂದರಲ್ಲಿ ಯುವತಿಯರ ಹಾರ್ಟ್ ಥ್ರೋಬ್ ರಣವೀರ್ ಸಿಂಗ್ ನೋಡಿದ್ದೇ ತಡ ಸಾರಾ ಅವನ ಜೊತೆ ಸೆಲ್ಫೀ ತೆಗೆದುಕೊಂಡು ಸಂಭ್ರಮಿಸಿದ್ದಾಳೆ. ಇಬ್ಬರೂ ನಗುತ್ತಿರುವ ಈ ಸುಂದರ ಫೋಟೋ ಈಗ ಇಂಟರ್ನೆಟ್ಟಿನಲ್ಲಿ ವೈರಲ್ ಆಗಿದೆ.

ಅಂದ ಹಾಗೆ ಕೆಲವು ಸಮಯದ ಹಿಂದೆ ಸಾರಾ ಬಾಲಿವುಡ್ಡಿಗೆ ಎಂಟ್ರಿಯಾಗುತ್ತಾಳೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಇದನ್ನು ಸ್ವತಃ ಸಚಿನ್ ತೆಂಡುಲ್ಕರ್ ಅಲ್ಲಗಳೆದಿದ್ದರು. ಆದರೇನು, ಮಗಳಿಗೆ ಬಣ್ಣದ ಲೋಕದ ಸೆಳೆತ ಇರಬಾರದೆಂದೇನೂ ಇಲ್ಲವಲ್ಲ…