ಸಚಿನ್ ಸಿನಿಮಾ ಮೇ26ಕ್ಕೆ ರಿಲೀಸ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಭಿಮಾನಿಗಳಿಗೀಗ ಸಂತಸದ ಸುದ್ದಿ. ಅವರನ್ನು ಅಂಗಳದ ಮೇಲೆ ಕಂಡು ಕಣ್ಣುತುಂಬಿಕೊಂಡಿದ್ದ ಅಭಿಮಾನಿಗಳೀಗ ಸದ್ಯವೇ ಅವರನ್ನು ತೆರೆಯ ಮೆಲೆ ನೋಡಬಹುದಾಗಿದೆ.

ಸ್ವತಃ ಸಚಿನ್ ಅಭಿನಯಿಸಿದ್ದ `ಸಚಿನ್: ಎ ಬಿಲಿಯನ್ ಡ್ರೀಮ್ಸ್’ ಚಿತ್ರ ಮೇ 26ರಂದು ರಿಲೀಸ್ ಆಗುತ್ತಿದೆ. ಇದನ್ನು ಸ್ವತಃ ಸಚಿನ್ ಟ್ವಿಟ್ಟರಿನಲ್ಲಿ ತಿಳಿಸಿದ್ದು `ಕ್ಯಾಲೆಂಡರಿನಲ್ಲಿ ಮಾರ್ಕ್ ಮಾಡಿ ಡೇಟ್ ಸೇವ್ ಮಾಡಿಕೊಳ್ಳಿ’ ಎಂದಿದ್ದಾರೆ.

sachin1 sachin

ಸಚಿನ್ ತನ್ನ 16ನೇ ವರ್ಷದಿಂದಲೇ ಕ್ರಿಕೆಟ್ ರಂಗದಲ್ಲಿ ಗುರುತಿಸಿಕೊಂಡವರು. 2013 ರಲ್ಲಿ ಎಲ್ಲಾ ವಿಭಾಗದ ಕ್ರಿಕೆಟಿನಿಂದ ನಿವೃತ್ತಿ ಪಡೆದಿದ್ದರು.

ಈಗ 42 ವರ್ಷದ ಕ್ರಿಕೆಟ್ ತಾರೆ ಅವರ ಆತ್ಮಕಥೆಯ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳಿಂದ ಕ್ರಿಕೆಟ್ ದೇವರು ಎಂದು ಕರೆಸಿಕೊಂಡಿರುವ ಸಚಿನರ 24 ವರ್ಷದ ಅದ್ಭುತ ಕ್ರಿಕೆಟ್ ಜರ್ನಿ ಈ ಸಿನಿಮಾದ ಮೂಲಕ ದಾಖಲೆಯಾಗಿ ಉಳಿಯಲಿದೆ.

ಸುಮಾರು 30 ತಿಂಗಳುಗಳ ಕಾಲ 5 ದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರಕ್ಕೆ ವಿದೇಶೀ ನಿರ್ದೇಶಕ ಜೇಮ್ಸ್ ಇರಸ್ಕಿನ್ ಆಕ್ಷನ್ ಕಟ್ ಹೇಳಿದ್ದು, ರವಿ ಭಾಗ್ಚಂದಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.