ತಾರತಮ್ಯ ಎದುರಿಸುತ್ತಿರುವ ಗ್ರಾಮಾಂತರ ಬಸ್ಸು ಆಟೋ

ಸಾಂದರ್ಭಿಕ ಚಿತ್ರ

ಮಂಗಳೂರು ಗ್ರಾಮಾಂತರ ಪ್ರದೇಶದಿಂದ ಬರುವ ಆಟೋ ರಿಕ್ಷಾಗಳು ಮತ್ತು ನಗರದ ಕಂಕನಾಡಿವರೆಗೆ ಚಲಾವಣೆ ಮಾಡುತ್ತಿರುವ ಬಸ್ಸುಗಳು ಮಂಗಳೂರು ನಗರದ ನೆಹರೂ ಮೈದಾನದ ಬಳಿಯಿರುವ ಬಸ್ ನಿಲ್ದಾಣವನ್ನು ಪ್ರವೇಶ ಮಾಡಿದರೆ ನಗರದ ಸಂಚಾರಿ ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯ ತನಿಖಾಧಿಕಾರಿಗಳು ವಾಹನಗಳ ಜಫ್ತಿ ಹಾಗೂ ಭಾರೀ ದಂಡ ವಿಧಿಸುತ್ತಾರೆ. ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಸಂಚಾರಿ ಪೊಲೀಸ್ ಇಲಾಖೆಗಳ ಪ್ರಕಾರ ನೆಹರೂ ಮೈದಾನದ ಬಳಿಯಿರುವ ಬಸ್ ನಿಲ್ದಾಣಕ್ಕೆ ಈ ವಾಹನಗಳು ಬಂದರೆ ಜಿಲ್ಲಾ ದಂಡಾಧಿಕಾರಿಯವರ ಅಧಿಸೂಚನೆ ಉಲ್ಲಂಘನೆಯಾಗುತ್ತದೆ.
ಖಾಸಗಿ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸುಗಳಿಗೆ ಮೋಟಾರು ವಾಹನ ಕಾಯಿದೆ ಪ್ರಕಾರ ಮತ್ತು ಸಾರಿಗೆ ಪ್ರಾಧಿಕಾರದಿಂದ ಅನುಮತಿ ಇಲ್ಲದೆ ಮಂಗಳೂರು ನಗರದ ಖಾಸಗಿ ಮತ್ತು ಸರಕಾರಿ ಮಜಲು ವಾಹನಗಳಿಗೆ  ಬಸ್ಸುಗಳಿಗೆ  ಸೀಮಿತವಾಗಿರುವ ಬಸ್ ನಿಲ್ದಾಣವನ್ನು ಪ್ರವೇಶ ಮಾಡಬಹುದಾದರೆ ನಗರದ ಹೊರವಲಯದಿಂದ ಬರುವ ಆಟೋ ರಿಕ್ಷಾಗಳು ಮತ್ತು ಗ್ರಾಮಾಂತರ ಪ್ರದೇಶದಿಂದ ನಗರದ ಕಂಕನಾಡಿವರೆಗೆ ಓಡಾಡುವ ಬಸ್ಸುಗಳು ಸದ್ರಿ ಬಸ್ ನಿಲ್ದಾಣವನ್ನು ಯಾಕೆ ಪ್ರವೇಶ ಮಾಡಬಾರದು
ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಮತ್ತು ಸಂಚಾರಿ ಪೊಲೀಸ್ ಇಲಾಖೆಯಿಂದ ಈ ತಾರತಮ್ಯವೇಕೆ
ಆದುದರಿಂದ ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಸಂಚಾರಿ ಪೊಲೀಸ್ ಇಲಾಖೆಗಳು ನಗರದ ಹೊರವಲಯದಿಂದ ಬರುವ ಆಟೋರಿಕ್ಷಾಗಳನ್ನು ಮತ್ತು ಗ್ರಾಮಾಂತರ ಪ್ರದೇಶದಿಂದ ನಗರದ ಕಂಕನಾಡಿವರೆಗೆ ಓಡಾಡುವ ಬಸ್ಸುಗಳನ್ನು ಸದ್ರಿ ಬಸ್ ನಿಲ್ದಾಣವನ್ನು ಮಂಗಳೂರು ನೆಹರೂ ಮೈದಾನದ ಬಳಿಯಿರುವ ಬಸ್ ನಿಲ್ದಾಣ  ಪ್ರವೇಶಿಸಲು ಮತ್ತು ಉಪಯೋಗಿಸಲು ಸಹಕರಿಸಬೇಕು. ಈ ವಿಚಾರದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಸಂಚಾರಿ ಪೊಲೀಸ್ ಇಲಾಖೆಗಳು ಯಾವುದೇ ತಾರತಮ್ಯ ಮಾಡಬಾರದು

  • ಕೆ ಪ್ರಕಾಶ್ ಭಂಡಾರಿ
    ಕಾರ್ಯದರ್ಶಿ  ಮಂಗಳೂರು ಗ್ರಾಮಾಂತರ ಸಾರಿಗೆ ಬಳಕೆದಾರರ ವೇದಿಕೆ  ತೊಕ್ಕೊಟ್ಟು ಮಂಗಳೂರು