ರಬ್ಬರ್ ಶೀಟ್ ಸಂಗ್ರಹಿಸಿದ್ದ ಕೋಣೆಗೆ ದಿಢೀರ್ ಬೆಂಕಿ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ರಬ್ಬರ್ ಸಂಗ್ರಹ ಕೇಂದ್ರ ಬೆಂಕಿಗಾಹುತಿಯಾಗಿ ಅಪಾರ ನಷ್ಟ ಸಂಭವಿಸಿದೆ. ವಿದ್ಯಾಗಿರಿ ಮುನಿಯೂರಿನ ಕೃಷ್ಣನ್ ನಾಯರ್ ಮನೆ ಬಳಿ ಬೆಂಕಿ ದುರ್ಘಟನೆ ಸಂಭವಿಸಿದ್ದು ಇದರಿಂದ 200 ರಬ್ಬರ್ ಶೀಟ್ ಉರಿದು ನಾಶ ಗೊಂಡಿದೆ. ಶೀಟುಗಳನ್ನು ಹೊಗೆ ತಾಗಲೆಂದು ಇರಿಸಿದಾಗ ಬೆಂಕಿ ಹತ್ತಿಕೊಂಡಿರುವುದಾಗಿ ಅಂದಾಜಿಸಲಾಗಿದೆ.