ಸರಕಾರದ ಎಫಿ ್ಡಐ ನೀತಿ ಟೀಕಿಸಿದ ಆರೆಸ್ಸೆಸ್

ನವದೆಹಲಿ : ಸಿಂಗಲ್ ಬ್ರ್ಯಾಂಡ್ ರಿಟೇಲ್ ಟ್ರೇಟಿಂಗ್ ಕ್ಷೇತ್ರದಲ್ಲಿ ಶೇ 100 ಎಫ್ಡಿಐ ಅನುಮತಿಸುವ ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಆರೆಸ್ಸಿನ ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ ವಿರೋಧಿಸಿದೆ. ಏರ್ ಇಂಡಿಯಾದಲ್ಲಿ ಶೇ 49ರಷ್ಟು ವಿದೇಶಿ ಬಂಡವಾಳ ಅನುಮತಿಸುವ ನಿರ್ಧಾರವನ್ನೂ ಮಂಚ್ ಟೀಕಿಸಿದೆ. ಎಫ್ಡಿಐ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗಿರುವ ಹಲವಾರು ನಿಬಂಧನೆಗಳನ್ನು ಸಡಿಲಿಸಿರುವ ಬಗ್ಗೆಯೂ  ಜಾಗರಣ್ ಮಂಚ್ ತನ್ನ ಅಸಮಾಧಾನ ತೋಡಿಕೊಂಡಿದೆ ಹಾಗೂ ಸರಕಾರ ತನ್ನ ಎಲ್ಲಾ ನಿರ್ಧಾರಗಳನ್ನೂ ಪುನರ್ ಪರಿಶೀಲಿಸಬೇಕೆಂದು ಕೋರಿದೆ.

 

LEAVE A REPLY