ನಗರೋತ್ಥಾನ ಯೋಜನೆಯಡಿ ಕಾರ್ಕಳ ಪುರಸಭೆಗೆ 7.50 ಕೋಟಿ ರೂ ಬಿಡುಗಡೆ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಮುಖ್ಯಮಂತ್ರಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮದ 3ನೇ ಹಂತದ ನಗರೋತ್ಥಾನ ಯೋಜನೆಯಡಿಯಲ್ಲಿ ಕಾರ್ಕಳ ಪುರಸಭೆಗೆ 7 ಕೋಟಿ 50 ಲಕ್ಷ ರೂ ಬಿಡುಗಡೆಯಾಗಿದೆ.

“ಈ ಅನುದಾನದಲ್ಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಮೊದಲ ಆದ್ಯತೆ ನೀಡಲಾಗುವುದು ಹಾಗೂ ಸುಸಜ್ಜಿತ ಚರಂಡಿ ನಿರ್ಮಾಣ, ರಸ್ತೆ ಡಾಮರೀಕರಣ ಹಾಗೂ ಇತರ ಅಗತ್ಯ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಮಾಡಲಾಗುವುದು. ಪ ಜಾತಿ, ಪ ಪಂಗಡಕ್ಕೆ ಶೇ 24.10 ಮೀಸಲಿಟ್ಟಿದ್ದು ನಗರದ ಪ ಜಾತಿ ಮತ್ತು ಪ ಪಂಗಡ ಜನವಸತಿ  ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು” ಎಂದು ಕಾರ್ಕಳ ಪುರಸಭಾ ಅಧ್ಯಕ್ಷೆ ಅನಿತಾ ಅಂಚನ್ ಹೇಳಿದ್ದಾರೆ.