ಎಸ್ಬಿಐ ಎಟಿಎಂನಿಂದ 22 ಲಕ್ಷ ರೂ ದರೋಡೆ

ಸಾಂದರ್ಭಿಕ ಚಿತ್ರ

ಕಲಬುರ್ಗಿ : ಅಪರಿಚಿತ ಗ್ಯಾಂಗೊಂದು ರಾಯಚೂರಿನ ಲಿಂಗಸಗೂರು ತಾಲೂಕಿನಲ್ಲಿ ಮೊನ್ನೆ ಎಟಿಎಂ ಯಂತ್ರ ಒಡೆದು 22 ಲಕ್ಷ ರೂ ದರೋಡೆ ಮಾಡಿದೆ. ಭಾನುವಾರ ಬೆಳಿಗ್ಗೆ ಉಪನ್ಯಾಸಕರೊಬ್ಬರು ಹಣ ಪಡೆಯಲು ಎಟಿಂಗೆ ತೆರಳಿದಾಗ ಹಟ್ಟಿ ಕ್ಯಾಂಪಿನಲ್ಲಿರುವ ಎಸ್‍ಬಿಐ ಎಟಿಎಂ ದರೋಡೆಗೈಲಾದ ವಿಷಯ ¨ಬೆಳಕಿಗೆ ಬಂದಿದೆ.

“ಸೆಕ್ಯೂರಿಟಿ ಇಲ್ಲದ ಈ ಎಟಿಎಂ ಪ್ರವೇಶಿಸುವ ಮುಂಚೆ ದುಷ್ಕರ್ಮಿಗಳು ಸೀಸಿಟೀವಿ ಕೇಬಲ್ ಕತ್ತರಿಸಿ ಹಾಕಿದ್ದಾರೆ” ಎಂದು ಪೊಲೀಸರು ತಿಳಿಸಿದರು.ಒಟ್ಟು 40 ಲಕ್ಷ ರೂ ಎಟಿಎಂಗೆ ಹಾಕಲಾಗಿತ್ತು. ಇದರಲ್ಲಿ 18 ಲಕ್ಷ ರೂ ಗ್ರಾಹಕರು ಪಡೆದುಕೊಂಡಿದ್ದು, ಉಳಿದ ಹಣ ಇತ್ತು ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿದ್ದಾರೆ.