2000 ರೂ ನೋಟು ಕೂಡ ಶೀಘ್ರ ರದ್ದು ?

ಹೈದರಾಬಾದ್ : ನವೆಂಬರ್ 8ರಂದು ಕೇಂದ್ರ ಸರಕಾರ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ನಂತರ ಹೊಸ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಾಗಲೇ ಈ ಹೊಸ ನೋಟನ್ನೂ ಅಮಾನ್ಯಗೊಳಿಸುವ ಯೋಚನೆ ಕೇಂದ್ರಕ್ಕಿದೆ ಎಂಬ ಗುಲ್ಲು ಹಬ್ಬಿತ್ತು. ಇದೀಗ ಇಂತಹುದ್ದೇ ಒಂದು ಮಾತು ದೇಶದ ಆರ್ಥಿಕ ಪುನರುಜ್ಜೀವನಕ್ಕಾಗಿ ಅಮಾನ್ಯೀಕರಣದಂತಹ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದ ಪುಣೆಯ ಅರ್ಥಕ್ರಾಂತಿ ಪ್ರತಿಷ್ಠಾನ್ ಸ್ಥಾಪಕ ಅನಿಲ್ ಬೋಕಿಲ್ ಅವರಿಂದಲೇ ಬಂದಿದೆ.

ಮುಂದಿನ ಲೋಕಸಭಾ ಚುನಾವಣೆ 2019ರಲ್ಲಿ ನಡೆಯಲಿದ್ದರೆ ಅದಕ್ಕಿಂತ ಮುನ್ನವೇ ಕೇಂದ್ರ  2000 ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನೂ ನಿಷೇಧಿಸುವ ಸಾಧ್ಯತೆ ಇದೆಯೆನ್ನುವ ಬಗ್ಗೆ ಅವರು ನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.