ಬಯಲು ಶೌಚ ಮಾಡುವವರ ಪೋಟೋಕ್ಕೆ 100 ರೂ !

ನವದೆಹಲಿ : ಮುನಿಸಿಪಾಲಿಟಿ ವ್ಯಾಪ್ತಿಯಲ್ಲಿ ಬಯಲು ಶೌಚ ಮಾಡುವ ವ್ಯಕ್ತಿಗಳ ಭಾವಚಿತ್ರ ತೆಗೆದು ಕಳುಹಿಸಿದವರಿಗೆ ಮಧ್ಯ ಪ್ರದೇಶದ ಗ್ವಾಲಿಯರ್ ಮುನಿಸಿಪಲ್ 100 ರೂ ಬಹುಮಾನ ನೀಡುವುದಾಗಿ ನಿನ್ನೆ ಪ್ರಕಟಿಸಿದೆ.

ಬಯಲು ಶೌಚ ಮಾಡುವವರ ವಿರುದ್ಧ ಕ್ರಮ ಜರುಗಿಸುವ ಉದ್ದೇಶದಿಂದ ಮುನಿಸಿಪಾಲಿಟಿ ಈ ಪ್ರಕಟಣೆ ಹೊರಡಿಸಿದೆ. ಬಯಲು ಶೌಚ ಮಾಡುವವರಿಗೆ ನಾಚಿಕೆಯಾಗುವಂತೆ ಈ ಪೋಟೊಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವಂತೆ ಪಂಚಾಯತು ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.