ಹತ್ತು ರೂಪಾಯಿ ನಾಣ್ಯ ಕಂಡರೆ ಬೆಚ್ಚಿ ಬೀಳುವುದೇಕೆ

ಹರಿದ ತೇಪೆ ಹಾಕಿದ ನೋಟುಗಳನ್ನು ಹೆಚ್ಚಾಗಿ ಜನರು ಸ್ವೀಕರಿಸುವುದಿಲ್ಲ. ನಾಣ್ಯಗಳ ವಿಷಯಕ್ಕೆ ಬಂದರೆ ಚಲಾವಣೆಯಲ್ಲಿಲ್ಲದ ನಾಣ್ಯಗಳ ಹೊರತಾಗಿ ಉಳಿದೆಲ್ಲ ನಾಣ್ಯಗಳನ್ನೂ ಸ್ವೀಕರಿಸಲಾಗುತ್ತದೆ. ಆದರೆ ಹತ್ತು ರೂಪಾಯಿ ನಾಣ್ಯಕ್ಕೆ ಮಾತ್ರ ಈ ಮಾತು ಅನ್ವಯಿಸುವುದಿಲ್ಲ. ಸರಕಾರ ಹತ್ತು ರೂಪಾಯಿ ನೋಟಿನ ಜತೆ ಹತ್ತು ರೂಪಾಯಿ ಮೌಲ್ಯದ ನಾಣ್ಯಗಳನ್ನೂ ಪರಿಚಯಿಸಿದೆ. ಆದರೆ ಜನರೇಕೋ ಈ ಹತ್ತು ರೂಪಾಯಿ ನಾಣ್ಯಗಳನ್ನು ಕಂಡರೆ ದೆವ್ವ ಕಂಡಂತೆ ಬೆಚ್ಚಿ ಬೀಳುತ್ತಿದ್ದಾರೆ ಈ ಹತ್ತು ರೂಪಾಯಿ ನಾಣ್ಯಗಳನ್ನು ಬಹುತೇಕ ಯಾರು ಕೂಡಾ ತೆಗೆದುಕೊಳ್ಳುವುದಿಲ್ಲ. ಮುಖ್ಯವಾಗಿ ಬಸ್ ಕಂಡಕ್ಟರುಗಳು ಮತ್ತು ರಿಕ್ಷಾ ಚಾಲಕರು ಈ ನಾಣ್ಯವನ್ನು ಸಾರಸಗಟಾಗಿ ತಿರಸ್ಕರಿಸಿರುತ್ತಾರೆ. ಇನ್ನೂ ಹೆಚ್ಚಿನ ವ್ಯಾಪಾರಿಗಳು ಕೂಡಾ ಹತ್ತು ರೂಪಾಯಿ ನಾಣ್ಯವನ್ನು ಕಂಡಾಗ ಮುಖ ಸಿಂಡರಿಸುತ್ತಾರೆ ಈ ನಾಣ್ಯವನ್ನು ಯಾವುದೇ ಭಯವಿಲ್ಲದೆ ಸ್ವೀಕರಿಸಬಹುದು ಎಂದು ಬ್ಯಾಂಕುಗಳು ಎಷ್ಟೋ ಬಾರಿ ಹೇಳಿದರೂ ಜನರು ಕೇಳುವ ಸ್ಥಿತಿಯಲ್ಲಿಲ್ಲ. ಈ ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆಯಲಾಗುತ್ತದೆ ಎಂಬ ವದಂತಿಯೇ ಈ ಗೊಂದಲಗಳಿಗೆ ಕಾರಣ ಪ್ರಧಾನಿ ಮೋದಿಯವರು ರೂಪಾಯಿ ಐನೂರು ಮತ್ತು ಒಂದು ಸಾವಿರ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಇತರ ವಿವಿಧ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡುವ ಸುಳ್ಳು ಸುದ್ದಿಗಳು ದಿನಕ್ಕೊಂದರಂತೆ ಹರಡುತ್ತಿದೆ. ಅದರ ಭಾಗವೇ ಹತ್ತು ರೂಪಾಯಿ ನಾಣ್ಯದ ಬಗೆಗಿರುವ ಗೊಂದಲ. ಈ ಗೊಂದಲದಿಂದ ಜನಸಾಮಾನ್ಯರು ಪರದಾಡುವಂತಾಗಿದೆ. ಬಹಳಷ್ಟು ಜನರಲ್ಲಿ ಈ ನಾಣ್ಯಗಳು ಅಧಿಕ ಸಂಖ್ಯೆಯಲ್ಲಿ ಶೇಖರಣೆಯಾಗಿದೆ ಅದಕ್ಕೆ ಕಾರಣ ಯಾರೂ ಈ ನಾಣ್ಯವನ್ನು ಸ್ವೀಕರಿಸದಿರುವುದು ಸರಕಾರವು ಕೂಡಲೇ ಈ ವಿಷಯದಲ್ಲಿ ಸ್ಪಷ್ಟೀಕರಣವನ್ನು ನೀಡುವ ಅಗತ್ಯವಿದೆ  ಹತ್ತು ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಅಮಾನ್ಯಗೊಳಿಸಲಾಗಿಲ್ಲ ಹಾಗಾಗಿ ಅದನ್ನು ಎಲ್ಲರೂ ಯಾವುದೇ ಅಳುಕಿಲ್ಲದೆ ಸ್ವೀಕರಿಸಬೇಕೆಂದು ಸರಕಾರ ಘೋಷಿಸಲಿ ಆ ಮೂಲಕವಾದರೂ ಜನರಲ್ಲಿ ಈ ನಾಣ್ಯದ ಬಗ್ಗೆ ಇರುವ ಗೊಂದಲ ನಿವಾರಿಸಲಿ

  • ರಮೇಶ್ ಕೆ ಎಸ್
    ಕಂಕನಾಡಿ  ಮಂಗಳೂರು

LEAVE A REPLY