ದಾರಿ ವಿಚಾರದಲ್ಲಿ ತಗಾದೆ : ದೂರು -ಪ್ರತಿದೂರು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ದಾರಿ ವಿಚಾರದಲ್ಲಿ ಎರಡು ಕುಟುಂಬಗಳು ಪರಸ್ಪರ ವಾಗ್ವಾದ ನಡೆಸಿ, ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಹೆಬ್ರಿ ಸಮೀಪದ ಕುಚ್ಚೂರು ಗ್ರಾಮದಲ್ಲಿ ನಡೆದಿದೆ.

ಕುಚ್ಚೂರು ಗ್ರಾಮದ ಮೇಲ್ಮನೆಬೆಟ್ಟು ಎಂಬಲ್ಲಿ ಭಾಸ್ಕರ್ ಪೂಜಾರಿ ಮತ್ತವರ ಕುಟುಂಬ ಸದಸ್ಯರು ಸೋಮವಾರ ಮಧ್ಯಾಹ್ನ ತಮ್ಮ ಮನೆಗೆ ಹೋಗುವ ದಾರಿಯನ್ನು ದುರಸ್ತಿ ಮಾಡುತ್ತಿದ್ದ ವೇಳೆ ಭಾಸ್ಕರ ಎಂಬವÀರ ಮಗಳು ಪೂರ್ಣಿಮಾ ಎಂಬವರಿಗೆ ಆರೋಪಿಗಳಾದ ಲಚ್ಚ ಪೂಜಾರ್ತಿ, ವಸಂತಿ ಪೂಜಾರ್ತಿ, ಮರಿಯ ಪೂಜಾರಿ ಹಾಗೂ ರಾಮಣ್ಣ ಪೂಜಾರಿ ಎಂಬವರು ದಾರಿ ವಿಚಾರದಲ್ಲಿ ತಗಾದೆ ತೆಗೆದು ಹಲ್ಲೆ ನಡೆಸಿದ್ದಾರೆ ಎಂದು ಪೂರ್ಣಿಮಾ ಹೆಬ್ರಿ ಠಾಣೆಗೆ ದೂರು ನೀಡಿದ್ದು, ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾಸ್ಕರ್ ಪೂಜಾರಿ ಸಾರ್ವಜನಿಕ ರಸ್ತೆಯನ್ನು ಕಬಳಿಸಲು ಯತ್ನಿಸಿದ್ದಲ್ಲದೆ ತಮ್ಮ ಗದ್ದೆಗೆ ಹೋಗಲು ದಾರಿ ಬಿಡುವಂತೆ ಲಚ್ಚ ಪೂಜಾರ್ತಿ ಅವರು ಕೇಳಿಕೊಂಡಾಗ ಸಿಟ್ಟಿಗೆದ್ದ ಭಾಸ್ಕರ್ ಮತ್ತವರ ತಂಡ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಲಚ್ಚ ಪೂಜಾರ್ತಿ ದೂರು ನೀಡಿದ್ದಾರೆ.