ಪ್ರತಿಭಾವಂತ ಸಂಗೀತಗಾರರಿಗೆ ಸ್ಪರ್ಧೆ

`ರಾಕ್ ಆನ್ ಮಂಗಳೂರು’ 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಫೋರಂ ಮಾಲ್ ರಾಕ್ ಆನ್ ಮಂಗಳೂರು ಎಂಬ ಸಂಗೀತ ಸ್ಪರ್ಧೆಯನ್ನು ಸಂಘಟಿಸಿದ್ದು, ನಗರದ ಹಲವಾರು ತೆರೆಮರೆಯ ಸಂಗೀತಗಾರರು ತಮ್ಮ ಸಂಗೀತ ಪ್ರತಿಭೆಗಳು ಹೊರಹೊಮ್ಮಲಿದೆ.

ಈ ಸಂಗೀತಗಾರರು ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಅನುಭವದೊಂದಿಗೆ ಜನಪ್ರಿಯ ಸೂಫಿ ಕಲಾವಿದ ಅಬ್ಬಾ ಹಂಜುರಾ, ಗಿಟಾರ್ ವಾದಕ, ಭಾರತದ ಜನಪ್ರಿಯ ಫ್ಯೂಷಿಯನ್ ಬ್ಯಾಂಡ್ ಇಂಡಿಯನ್ ಓಸಿಯನ್ ಸಂಸ್ಥಾಪಕ ಸುಸ್ಮಿತ್ ಸೇನ್ ಮತ್ತು ಹಿಂದಿ ಫೋಲ್ಕ್ ಬ್ಯಾಂಡ್ ಔರ್ಕೊ ಲೈವ್ ಕ್ಯಾಪ್ಟನ್ ಮತ್ತು ಕಂಪೋಸರ್ ಸುಪ್ರತಿಕ್ ಘೋಷ್ ಈ ಮೂವರ ಎದುರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ಕೂಡ ದೊರೆಯಲಿದೆ.

ಈ ಮೂರು ಸುಪ್ರಸಿದ್ದರು ಡಿಸೆಂಬರ್ 17ರಂದು ನಡೆಯಲಿರುವ ರಾಕ್ ಆನ್ ಮಂಗಳೂರು ಇದರ ಫಿನಾಲೆಯಲ್ಲಿ ತೀರ್ಪುಗಾರರಾಗಿ ಇರಲಿದ್ದಾರೆ.