ಎಟಿಎಂ ಕಳವಿಗೆ ಯತ್ನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಬ್ರಹ್ಮಾವರ ಸಮೀಪದ ನೀಲಾವರ ಗ್ರಾಮದ ಕುಂಜಾಲು ಶಾಖೆಯ ಕಾರ್ಪೊರೇಷನ್ ಬ್ಯಾಂಕಿನ ಎಟಿಎಂ ಯಂತ್ರವನ್ನು ಕಳ್ಳರು ಗ್ಯಾಸ್ ಕಟ್ಟರಿನಿಂದ ಕಟ್ ಮಾಡಿ ಹಣವನ್ನು ಕಳವುಗೈಯ್ಯಲು ವಿಫಲ ಯತ್ನ ನಡೆಸಿದ್ದು, ಈ ಬಗ್ಗೆ ಬ್ಯಾಂಕಿನ ಮ್ಯಾನೇಜರ್ ಕೆ ದಿನಕರ ರಾವ್ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.