ಅಪಾಯ ಆಹ್ವಾನಿಸುತ್ತಿದೆ ರಸ್ತೆಯಂಚಿನ ಕಂಬ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಸೀತಾಂಗೊಳಿಯಿ0ದ ಬದಿಯಡ್ಕ ರಾಜ್ಯ ಹೆದ್ದಾರಿಯ ದರ್ಬೆತಡ್ಕ ಮತ್ತು ಕಟ್ಟತ0ಗಡಿ ಮಧ್ಯೆ ಕಪಿತಾನಿಯೋ ಶಾಲೆಯ ಸಮೀಪ ಕೇರಳ ವಿದ್ಯುತ್ ಮಂಡಳಿಯ ವಿದ್ಯುತ್ ಕ0ಬವೊ0ದು ಅಪಾಯವನ್ನು ಆಹ್ವಾನಿಸುತ್ತಿದೆ.

ರಸ್ತೆ ಅಗಲೀಕರಣ ನಡೆಸಿದಾಗ ವಿದ್ಯುತ್ ಕಂಬ ರಸ್ತೆಯ ಒಂದು ಪಾಶ್ರ್ವದಲ್ಲಿದ್ದು, ಅದನ್ನು ಬೇರೆಡೆಗೆ ಸ್ಥಳಾಂತರಿಸಲು ತೋರಿದ ಅಸಡ್ಡೆಯಿಂದ ಡಾಮರು ಕಂಬವನ್ನು ಬಳಸಿ ಸಾಗಿದ್ದು, ಇದೀಗ ಸಂಚಾರದ ಅಪಾಯಕ್ಕೆ ಕಾರಣವಾಗಿದೆ. ನಿರಂತರ ವಾಹನ ದಟ್ಟಣೆಯ ಈ ರಾಜ್ಯ ಹೆದ್ದಾರಿಲ್ಲಿರುವ ವಿದ್ಯುತ್ ಕಂಬದಿಂದ ವಾಹನಗಳು ಪರಸ್ಪರ ದಾರಿಬಿಟ್ಟುಕೊಡುವಾಗ ವ್ಯಾಪಕ ತೊಂದರೆಗಳಾಗಿ ಭೀತಿಗೆ ಕಾರಣವಾಗುತ್ತಿದೆ.

ಜೊತೆಗೆ ಶಾಲಾ ಪರಿಸರವಾಗಿರುವುದರಿಂದ ವಿದ್ಯಾರ್ಥಿಗಳ ಪಾಲಿಗೆ ನರಕ ಸದೃಶವಾಗಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.