ರಸ್ತೆ ದುರಸ್ತಿ ಮಳೆಗಾಲ ಮುಗಿದ ಕೂಡಲೇ ಮಾಡಿ ಮುಗಿಸಿ

ಮಳೆಗಾಲದಲ್ಲಿ ಕೆಟ್ಟು ಹೋದ ರಸ್ತೆಯನ್ನು ಮಳೆಗಾಲ ಮುಗಿದ ಕೂಡಲೇ ದುರಸ್ತಿ ಮಾಡುವುದಿಲ್ಲ. ಅದಕ್ಕೆ ನೇರವಾಗಿ ಫೆಬ್ರವರಿ, ಮಾರ್ಚ್ ನಂತರವೇ ದುರಸ್ತಿ ಮಾಡಲಾಗುತ್ತದೆ. ಆದರೆ ಮೂರ್ನಾಲ್ಕು ತಿಂಗಳಲ್ಲೇ ಮತ್ತೆ ಮಳೆಗಾಲ ಆಗಮಿಸಿ ದುರಸ್ತಿಪಡಿಸಿದ ರಸ್ತೆಗಳು ಮರಳಿ ಕೆಟ್ಟು ಹೋಗುತ್ತದೆ. ಈ ರಸ್ತೆ ದುರಸ್ತಿಯೆಂಬ ಪ್ರಹಸನಕ್ಕೆ ಸರಕಾರಿ ಖಜಾನೆಯಿಂದ ಕೋಟಿ ಕೋಟಿ ರೂ ಖರ್ಚಾಗುತ್ತದೆ. ಇಂತಹ ರಸ್ತೆ ದುರಸ್ತಿಯನ್ನು ಮಳೆಗಾಲ ಮುಗಿದ ಕೂಡಲೇ ಮಾಡಬಾರದೇಕೆ  ಸ್ವಲ್ಪ ಹೆಚ್ಚು ಕಾಲ ಅದರಲ್ಲಿ ಸಂಚರಿಸಬಹುದು ಅಥವಾ ಕೆಟ್ಟು ಹೋಗದ ರಸ್ತೆಗಳನ್ನೇ ನಿರ್ಮಿಸಬಾರದೇಕೆ

  • ಬಿ ಟಿ ನಾರಾಯಣ ಭಟ್ಟ  ನೇರಳಕಟ್ಟೆ