ಅಭಿವೃದ್ಧಿ ಜತೆ ಪರಿಸರ ಕೂಡಾ ರಕ್ಷಿಸಿ

ಪರಿಸರ ಎಂಬುದು ಜೀವಸಂಕುಲ ಮರ ಗಿಡ ಸಂಪನ್ಮೂಲಗಳ ಸಮೂಹ. ಇಂತಹ ಸುಂದರ ಪರಿಸರವನ್ನು ಅಭಿವೃದ್ಧಿ ಹೆಸರಲ್ಲಿ ನಾಶ ಮಾಡುತ್ತಿರುವುದು ವಿಪರ್ಯಾಸ ಜನಸಂಖ್ಯೆ ಹೆಚ್ಚಾಗುತ್ತಿರುವ ಈ ಆಧುನಿಕ ಕಾಲದಲ್ಲಿ ಅಭಿವೃದ್ಧಿ ಬೇಕು. ಆದರೆ ಮರ ಗಿಡಗಳನ್ನು ಕಡಿದು ರಸ್ತೆ ಕಟ್ಟಡ ನಿರ್ಮಾಣ ಮಾಡಿದರೆ ಉಸಿರಾಡಲು ಶುದ್ಧ ಗಾಳಿ ಸಿಗದೆ ಜೀವಸಂಕುಲಗಳು ನಾಶ ಹೊಂದಬಹುದು ಅಧಿಕಾರಿಗಳು ಜನಪ್ರತಿನಿಧಿಗಳು ಯೋಜನೆಗಳನ್ನು ರೂಪಿಸು ವಾಗ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಯೋಜನೆಗಳನ್ನು ರೂಪಿಸುವುದು ಸೂಕ್ತ. ರಸ್ತೆ, ಕಟ್ಟಡ ನಿರ್ಮಾಣ ಯೋಜನೆಗಳ ಅನುಷ್ಠಾನಕ್ಕಾಗಿ ಅರಣ್ಯ ನಾಶ ನಡೆದರೆ ಅದರ ಎರಡನ್ನು ನೆಟ್ಟು ಪರಿಸರ ಸಂರಕ್ಷಿಸುವುದು ಉತ್ತಮ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೆಸರಲ್ಲಿ ಎಷ್ಟೋ ಮರ ಗಿಡಗಳು ನಾಶ ಹೊಂದುತ್ತಿವೆ ಆದರೆ ಇದು ಸರಿಯಲ್ಲ ಅಭಿವೃದ್ಧಿ ಜೊತೆ ಪರಿಸರವನ್ನು ಕೂಡಾ ರಕ್ಷಿಸಬೇಕು

  • ಚಂದನ್ ಸುವರ್ಣ  ಗುತ್ತಿಗಾರ್  ವಿಟ್ಲ

LEAVE A REPLY