ಕಾಂಕ್ರೀಟ್ ರಸ್ತೆ ಕೆಲಸಕ್ಕೆ ಚಾಲನೆ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಇಳಂತಿಲ ಗ್ರಾಮ ಪಂಚಾಯತ್ ವತಿಯಿಂದ ನೇಜಿಕಾರು-ಅಂಬೊಟ್ಟು-ಪಾಂಡಿಬೆಟ್ಟು ರಸ್ತೆಯಲ್ಲಿ 70 ಮೀಟರ್ ಉದ್ದ ಕಾಂಕ್ರೀಟ್ ಕಾಮಗಾರಿಗೆ ಚಾಲನೆ ನೀಡಲಾಯಿತು.

ಉಪ್ಪಿನಂಗಡಿ-ಗುರುವಾ ಯನಕರೆ ರಸ್ತೆಯಿಂದ ಪಾಂಡಿಬೆಟ್ಟಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಆರಂಭದ ಬಳಿ ಏರು ಪ್ರದೇಶದಿಂದ ಕೂಡಿದ್ದು, ಮಣ್ಣಿನ ರಸ್ತೆ ಇದಾಗಿರುವುದರಿಂದ ಮಳೆಗಾಲದಲ್ಲಿ ನೀರು ಹರಿದು ಸಂಚಾರಕ್ಕೆ ಅಸಾಧ್ಯವಾಗಿತ್ತು. ಇದನ್ನು ಮನಗಂಡ ಪಂಚಾಯತ್ ಆಡಳಿತ ರಸ್ತೆಯು ಹೆಚ್ಚು ಹದಗೆಡುವ ಸ್ಥಳದಲ್ಲಿ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಸಲು ನಿರ್ಧರಿಸಿ, ಅಂಬೊಟ್ಟು ಬಳಿ ಉದ್ಯೋಗ ಖಾತ್ರಿ ಯೋಜನೆಯಡಿ 3 ಲಕ್ಷ ರೂಪಾಯಿ ವೆಚ್ಚದಲ್ಲಿ 70 ಮೀ. ಉದ್ದ ಹಾಗೂ 12 ಫೀಟ್ ಅಗಲದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದೆ.

ಕಾಮಗಾರಿಯ ಸಂದರ್ಭ ಗ್ರಾ.ಪಂ. ಸದಸ್ಯ ಯು ಟಿ ಫಯಾಝ್ ಅಹ್ಮದ್, ಅಶ್ರಫ್ ಅಂಬೊಟ್ಟು, ನಾಸೀರ್ ಅಂಬೊಟ್ಟು, ರಶೀದ್ ಕಡವಿನ ಬಾಗಿಲು ಮತ್ತಿತರರು ಇದ್ದರು.