ದಾವೂದನೊಂದಿಗೆ ಆತನ ಮನೆಯಲ್ಲಿ ಟೀ ಪಾರ್ಟಿ ಮಾಡಿದ್ದ ರಿಷಿ

ರಿಷಿ ಕಪೂರ್, ದಾವೂದ್ ಇಬ್ರಾಹಿಂ

1993ರಲ್ಲಿ ಮುಂಬೈಯಲ್ಲಿ ಸರಣಿ ಬಾಂಬ್ ಸ್ಫೋಟಗೊಳ್ಳುವುದಕ್ಕಿಂತ ಮುಂಚೆ ಅಂದರೆ, 1988ರಲ್ಲಿ ಬಾಲಿವುಡ್ ನಟ ರಿಷಿ ಕಪೂರ್, ದುಬೈಯಲ್ಲಿ ಆಶ್ರಯ ಪಡೆದಿದ್ದ ಗ್ಯಾಂಗ್‍ಸ್ಟರ್ (ಈಗಿನ ಅಂತಾರಾಷ್ಟ್ರೀಯ ಭಯೋತ್ಪಾದಕ) ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿ, ಟೀ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ರಿಷಿ ಕಪೂರ್ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ.

1993ರಲ್ಲಿ ಮುಂಬೈಯಲ್ಲಿ ಸರಣಿ ಬಾಂಬ್ ಸ್ಫೋಟಗೊಳ್ಳುವುದಕ್ಕಿಂತ ಮುಂಚೆ ಅಂದರೆ, 1988ರಲ್ಲಿ ಬಾಲಿವುಡ್ ನಟ ರಿಷಿ ಕಪೂರ್, ದುಬೈಯಲ್ಲಿ ಆಶ್ರಯ ಪಡೆದುಕೊಂಡಿದ್ದ ಗ್ಯಾಂಗ್‍ಸ್ಟರ್ ದಾವೂದ್ ಇಬ್ರಾಹಿಂ ಕಾಸ್ಕರನನ್ನು ಭೇಟಿಯಾಗಿ, ಟೀ ಪಾರ್ಟಿ ನಡೆಸಿ, ಕೈಕುಲುಕ್ಕಿದ್ದ ನೆನಪೊಂದನ್ನು ಪತ್ರಕರ್ತರಲ್ಲಿ ಬಿಚ್ಚಿಟ್ಟಿದ್ದಾರೆ.

ದುಬೈಯಲ್ಲಿದ್ದ ಆಗರ್ಭ ಶ್ರೀಮಂತನಾಗಿದ್ದ ದಾವೂದ್ ಬಾಲಿವುಡ್ ಮತ್ತು ಕ್ರಿಕೆಟಿಗ ಆಸಕ್ತನಾಗಿದ್ದ. ವರ್ಷಗಳ ಹಿಂದೆ ದಾವೂದ್ ದುಬೈಯಲ್ಲಿ ಬಾಲಿವುಡ್ ನಟ-ನಟಿಯರ ಸಂಗಮದಲ್ಲಿ ಅದ್ದೂರಿ ರಸಮಂಜರಿ ಪ್ರಾಯೋಜಿಸುತ್ತಿದ್ದ.

1993ರಲ್ಲಿ ಮುಂಬೈಯಲ್ಲಿ ಸರಣಿ ಬಾಂಬ್ ಸ್ಫೋಟಗೊಳ್ಳುವುದಕ್ಕಿಂತ ಮುಂಚೆ ಅಂದರೆ, 1988ರಲ್ಲಿ ಬಾಲಿವುಡ್ ನಟ ರಿಷಿ ಕಪೂರ್, ದುಬೈಯಲ್ಲಿ ಆಶ್ರಯ ಪಡೆದಿದ್ದ ಗ್ಯಾಂಗ್‍ಸ್ಟರ್ (ಈಗಿನ ಅಂತಾರಾಷ್ಟ್ರೀಯ ಭಯೋತ್ಪಾದಕ) ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿ, ಟೀ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ರಿಷಿ ಕಪೂರ್ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ.

ಬಾಲಿವುಡ್ಡಿನಲ್ಲಿ ರಿಷಿ ಚಾಕಲೇಟ್ ಹೀರೋ ಆಗಿದ್ದರು. ಚಲನಚಿತ್ರ ರಂಗದ ಹಿರಿಯ ಪತ್ರಕರ್ತೆ ಮೀನಾ ಅಯ್ಯರ್ ರಿಷಿ ಜೀವನ ಚರಿತ್ರೆ ಬರೆಯುತ್ತಿದ್ದು, ಅದರಲ್ಲಿ ಅವರು ದುಬೈಯಲ್ಲಿ ದಾವೂದನ ಮನೆಯಲ್ಲಿ ಟೀ-ಪಾರ್ಟಿ ನಡೆಸಿದ ನೆನಪನ್ನು ದಾಖಲಿಸಿಕೊಂಡಿದ್ದಾರೆ. ರಿಷಿ-ದಾವೂದ್ ಭೇಟಿ, ಆತ (ದಾವೂದ್) ಮುಂಬೈ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕುಖ್ಯಾತನಾಗುವುದಕ್ಕಿಂತ ಮುಂಚಿನ ಸಂಗತಿಯಾಗಿದೆ.

ದುಬೈ ವಿಮಾನ ನಿಲ್ದಾಣದೊಳಗೆ ಪ್ರವೇಶಿಸುವ ಸಿಲೆಬ್ರಿಟಿಗಳ ಮಾಹಿತಿ ಪಡೆಯಲು ನಿಲ್ದಾಣದಲ್ಲಿ ದಾವೂದ್ ಕೆಲವು ಮಾಹಿತಿದಾರರನ್ನು ನಿಯುಕ್ತಿಗೊಳಿಸಿದ್ದ. 1988ರ ಒಂದು ದಿನ ರಿಷಿ ಮತ್ತು ಅವರ ಆಪ್ತ ಗೆಳೆಯ ಬಿಟ್ಟು ಆನಂದ್ ದುಬೈಗೆ ಭೇಟಿ ನೀಡಿದ್ದು, ಈ ವಿಷಯ ತಿಳಿಯುತ್ತಲೇ ರಿಷಿಗೆ ಕರೆ ಮಾಡಿದ ದಾವೂದ್ ತನ್ನ ಮನೆಗೆ ಬರಮಾಡಿಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ಇಬ್ಬರೂ ಏಕಾಂತದಲ್ಲಿ ಟೀ  ಸವಿದಿರುವುದು ಒಂದು ಮರೆಯಲಾಗದ ನೆನಪೆಂದು ರಿಷಿ ಹೇಳುತ್ತಾರೆ. ಮನೋರಂಜನಾ ಕಾರ್ಯಕ್ರಮ ಉದ್ದೇಶದಿಂದ ರಿಷಿ ಮತ್ತು ಬಿಟ್ಟು ದುಬೈಗೆ ಭೇಟಿ ನೀಡಿದ ಸಂದರ್ಭ ಅದಾಗಿತ್ತು.

ಆಗ ದಾವೂದ್ ಗ್ಯಾಂಗಸ್ಟರ್ ಎಂಬುದು ತನಗೆ ಗೊತ್ತಿತ್ತು. ಆಗ ಆತ ಭಯೋತ್ಪಾದಕನಾಗಿರಲಿಲ್ಲ. ಅವನಿಂದ ತನಗೆ ಯಾವುದೇ ತೊಂದರೆಯಾಗಿಲ್ಲ ಎಂದು ರಿಷಿ ಹೇಳುತ್ತಾರೆ. “ಅಂದು ನಾನು ಮತ್ತು ಬಿಟ್ಟು ನಮ್ಮ ಹೋಟೆಲಿನಿಂದ ರೋಲ್ಸ್ ರೋಯ್ಸ್ ಕಾರಲ್ಲಿ ದಾವೂದ್ ಮನೆಯತ್ತ ಪ್ರಯಾಣ ಬೆಳೆಸಿದ್ದೆವು. ಮನೆ ತಲುಪುತ್ತಲೇ ಆತ ನಮ್ಮನ್ನು ಆತ್ಮೀಯತೆಯಿಂದ ಸ್ವಾಗತಿಸಿದ. ನಾನು ನಿಮ್ಮನ್ನು ಟೀ ಕುಡಿಯಲು ಇಲ್ಲಿಗೆ ಕರೆದಿದ್ದೇನೆ. ಯಾಕೆಂದರೆ ನನ್ನಿಂದ ಮದ್ಯ ಪೂರೈಸಲು ಸಾಧ್ಯವಿಲ್ಲ ಎಂದಾತ ಹೇಳಿದ್ದ” ಎಂದು ರಿಷಿ ನೆನಪಿಸಿಕೊಂಡಿದ್ದಾರೆ.

“ಮೂವರೂ ಸುಮಾರು ನಾಲ್ಕು ತಾಸು ಮಾತುಕತೆ ಬಾಲಿವುಡ್ ಹಾಗೂ ಇತರ ವಿಷಯ ಚರ್ಚಿಸಿದ್ದೆವು. ಆತ ಕ್ರಿಮಿನಲ್ ಚಟುವಟಿಕೆಯ ಮಾಹಿತಿ ನೀಡುತ್ತ, ಕೆಲವು ಘಟನೆಗಳ ಬಗ್ಗೆ ತನ್ನಲ್ಲಿ ವಿಷಾದವೆಂಬುದೇ ಇಲ್ಲ ಎಂದಿದ್ದ. ನಾನು ಸಣ್ಣ ಕಳ್ಳತನ ಮಾಡಿದ್ದೇನೆ. ಆದರೆ ಯಾರನ್ನೂ ಕೊಂದಿಲ್ಲ. ಆದರೂ ನನಗೆ ಕೊಲೆಗಾರರ ಪಟ್ಟ ಕಟ್ಟಲಾಗಿದೆ” ಎಂದಾತ ರಿಷಿಯಲ್ಲಿ ಹೇಳಿದ್ದ.

1985ರಲ್ಲಿ ಬಿಡುಗಡೆಗೊಂಡಿದ್ದ `ತವಾಯಿಫ್’ ಚಿತ್ರದಲ್ಲಿ ದಾವೂದ್ ಪಾತ್ರದಲ್ಲಿ ನಟಿಸಿದ್ದ ರಿಷಿ ಬಗ್ಗೆ ದಾವೂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಅದರಲ್ಲಿ ದಾವೂದ್ ಹೆಸರನ್ನು ವೈಭವೀಕರಿಸಲಾಗಿತ್ತು. ಇಲ್ಲಿಗೆಯೇ ದಾವೂದ್-ರಿಷಿ ಭೇಟಿ ಮುಗಿಯುವುದಿಲ್ಲ. ಇದಾದ ಎರಡು ವರ್ಷಗಳ ಬಳಿಕ ದುಬೈ ಮಾಲೊಂದರಲ್ಲಿ ಇಬ್ಬರೂ ಮತ್ತೆ ಸಂಧಿಸಿದ್ದರು. ಆಗ ದಾವೂದ್ ಹಿಂದೆಮುಂದೆ 10 ಅಂಗರಕ್ಷಕರಿದ್ದರು. “ರಿಷಿ ನಿಮಗೆ ಏನು ಬೇಕೋ ಅದನ್ನು ಖರೀದಿಸಿ” ಎಂದು ದಾವೂದ್ ಹೇಳಿದ್ದ. ನಂತರ ಆತನನ್ನು ತಾನು ಭೇಟಿಯಾಗಿಲ್ಲ ಅಥವಾ ದಾವೂದನಿಂದ ಯಾವುದೇ ಕರೆ ಸ್ವೀಕರಿಸಿಲ್ಲ ಎಂದು ರಿಷಿ ಹೇಳಿಕೊಂಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ 2013ರಲ್ಲಿ ನಿಖಿಲ್ ಅದ್ವಾನಿಯ `ಡಿ-ಡೇ’ ನಾಟಕದಲ್ಲಿ ದಾವೂದ್ ಆಧರಿತ ಪಾತ್ರವೊಂದರಲ್ಲಿ ರಿಷಿ ನಟಿಸಿದ್ದರು.