ರಾಜ್ಯದಲ್ಲಿ ಚಿಕೊನ್ ಗುನ್ಯಾ ಪ್ರಕರಣ ಹೆಚ್ಚಳ

ಬೆಂಗಳೂರು : ದೇಶಾದ್ಯಂತ ದಾಖಲಾಗಿರುವ 47,500 ಚಿಕೂನ್ ಗುನ್ಯಾ ಪ್ರಕರಣಗಳ ಪೈಕಿ ಕರ್ನಾಟಕದಲ್ಲಿ ದಾಖಲೆ ಪ್ರಮಾಣದ 25,800 ಪ್ರಕರಣಗಳು ಒಳಗೊಂಡಿವೆ ಎಂದು ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮ (ಎನ್ವಿಬಿಡಿಸಿಪಿ) ಹೇಳಿದೆ.
2011ರಿಂದ ಚಿಕೂನ್ ಗುನ್ಯಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. 2011ರಲ್ಲಿ 1941, 2015ರಲ್ಲಿ 20,700 ಮತ್ತು 2016ಲ್ಲಿ 15,600 ಪ್ರಕರಣ ಪತ್ತೆಯಾಗಿದೆ. ಈ ವರ್ಷ ಜನವರಿ-ನವಂಬರಿನವರೆಗೆ 25,829 ಪ್ರಕರಣ ಪತ್ತೆಯಾಗಿದೆ.
“ಒಟ್ಟು 2,300 ಶಂಕಿತ ಚಿಕೂನ್ ಗುನ್ಯಾ ಪ್ರಕರಣ ದಾಖಲಾಗಿದೆ” ಎಂದು ಎನ್ವಿಬಿಡಿಸಿಪಿ ಉಪ-ನಿರ್ದೇಶಕ ಡಾ ಪ್ರಕಾಶ್ ಕುಮಾರ್ ತಿಳಿಸಿದರು.
ಕರ್ನಾಟಕದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಇಷ್ಟೊಂದು ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ. ಮಳೆಗಾಲದಲ್ಲಿ ಚಿಕೂನ್ ಗುನ್ಯಾ ಹರಡುವ ಪ್ರಮಾಣ ಹೆಚ್ಚಾಗಿತ್ತು. ಮನೆ ಆವರಣದಲ್ಲಿ, ಮುಖ್ಯವಾಗಿ ನೀರು ನಿಲ್ಲುವ ಪ್ರದೇಶಗಳು ಈ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ ಎಂದರು. ಕಳೆದ ವರ್ಷ ನಗರದಲ್ಲಿ ಅತ್ಯಧಿಕ ಸಂಖ್ಯೆಯ ಚಿಕೂನ್ ಗುನ್ಯಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿತ್ತು.
ಆರೋಗ್ಯ ಕಾರ್ಯಕರ್ತರು ಮನೆಮನೆಗಳಿಗೆ ಭೇಟಿ ನೀಡಿ ಸೊಳ್ಳೆಗಳು ಹರಡುವ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ಹಾಗೂ ಜನ ಜಾಗೃತಿ ಮಾಹಿತಿ ನೀಡುತ್ತಿದ್ದಾರೆಂದು ಡಾ ಪ್ರಕಾಶ್ ಹೇಳಿದರು.