ಬಲಪಂಥೀಯ ದುಷ್ಕರ್ಮಿಗಳಿಂದ ಗೌರಿ ಕೊಲೆ : ತನಿಖಾ ತಂಡ

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ಬಲ-ಪಂಥೀಯ ಪ್ರವೃತ್ತಿವುಳ್ಳ ಘಟಕದೊಂದಿಗೆ ಸೇರಿಕೊಂಡಿರುವ ದುಷ್ಕರ್ಮಿಗಳ ಗುಂಪೊಂದು ಕೆಲಸ ಮಾಡಿದೆ ಎಂದು ಕೇಸನ್ನು ತನಿಖೆ ಮಾಡುತ್ತಿರುವ ತಂಡ  ತಿಳಿಸಿದ್ದಾರೆ“ಹಂತಕನ ಸ್ಕೆಚ್ ಬಿಡಿಸಲಾಗಿದ್ದರೂ, ತನಿಖೆಗೆ ಧಕ್ಕೆಯಾಗಬಹುದೆಂಬ ಉದ್ದೇಶದಿಂದ ಸಾರ್ವಜನಿಕಗೊಳಿಸಿಲ್ಲ” ಎಂದು ಅಧಿಕಾರಿಯೊಬ್ಬರು ತಿಳಿಸಿದರು. “ಹಂತಕರು ಹೆಚ್ಚೇನೂ ಪ್ರವಾಸ ಮಾಡಿಲ್ಲ ಎಂಬುದು ಪ್ರಸಕ್ತ ತನಿಖೆಯಿಂದ ಗೊತ್ತಾಗಿದೆ. ಗೌರಿಯ ಬರವಣಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಬರೆಹಗಳಿಂದ ಕೆಲವರು ಹತಾಶರಾಗಿದ್ದಾರೆ. ಪ್ರಕರಣದಲ್ಲಿ ಒಬ್ಬನ ಬಂಧನವಾದಲ್ಲಿ ಗೌರಿ ಕೊಲೆ ಹಿಂದಿನ ರಹಸ್ಯ ಬಿಡಿಸಲು ಸುಲಭವಾಗಲಿದೆ” ಎಂದರು.