ಚೆಕ್ ಬೌನ್ಸ್ ಜಾಮೀನುರಹಿತ ಅಪರಾಧ ಕ್ರಮ ಸರಿಯಾಗಿದೆ

ಇಷ್ಟರತನಕ ಕೆಲವು ಡೋಂಗಿ ಮೋಸ ಮಾಡುವ ವ್ಯಕ್ತಿಗಳು ಯಾರ್ಯಾರ ಸಾಲ ತೆಗೆದೋ  ಯಾವ್ಯಾವ ಸ್ಕೀಮ್ ಮಾಡಿಯೋ ದುಡ್ಡು ಮಾಡಿ ಸಾಲಗಾರರಿಗೆ ಬ್ಯಾಂಕಿನಲ್ಲಿ ಚಿಕ್ಕಾಸು ಇಲ್ಲದಿದ್ರೂ  ದೊಡ್ಡ ಮರ್ಜಿ ತೋರಿಸಲು ಲಕ್ಷ ಲಕ್ಷ ರೂಪಾಯಿಗೆ ಚೆಕ್ ನೀಡಿ ಅದು ಬೌನ್ಸ್ ಆಗಿ ಸಾಲ ಅಥವಾ ಹಣ ಕೊಟ್ಟವನು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಕೋರ್ಟಿಗೆ ಹೋದರೂ ಸಹ ಚೆಕ್ ಕೊಟ್ಟವನು ಆರಾಮಾಗಿಯೇ ಇರುತ್ತಿದ್ದರು. ಆದರೆ ಕೇಂದ್ರ ಸರಕಾರ ಇನ್ಮುಂದೆ ಇಂತಹ ಪ್ರಕರಣಕ್ಕೆ ಜಾಮೀನುರಹಿತ ಅಪರಾಧ ಎಂಬ ಕಠಿಣ ಕಾನೂನನ್ನು ಜಾರಿಗೊಳಿಸಲು ಹೊರಟಿರುವುದು ನಿಜಕ್ಕೂ ಶ್ಲಾಘನೀಯ  ಇಂತಹ ಕಠಿಣ ಕ್ರಮ ಇಲ್ಲದ ಕಾರಣ ವಿವಿಧ ಕೋರ್ಟುಗಳಲ್ಲಿ ಚೆಕ್ ಬೌನ್ಸ್ ಕೇಸ್‍ಗಳು 18.63 ಲಕ್ಷಕ್ಕೆ ಏರಿದೆ  ಚೆಕ್ ಬೌನ್ಸ್ ಕೇಸುಗಳು ಐದಾರು ವರ್ಷಗಳತನಕ ಇತ್ಯರ್ಥವಾಗದಿದ್ದರೆ ಹೀಗೇನೇ ಎಲ್ಲರೂ ಚೆಕ್ ಕೊಟ್ಟು ಮೋಸ ಮಾಡುತ್ತಾರೆ  ಕೆಲವು ಪ್ರಕರಣ ಕೋಟಿನಲ್ಲಿ ಇತ್ಯರ್ಥವಾಗಿ ಹಣವನ್ನು ಆರೋಪಿ ಎರಡ್ಮೂರು ತಿಂಗಳೊಳಗೆ ಪಾವತಿಸಲು ಆದೇಶ ನೀಡಿದರೂ ಹಣವನ್ನು ಪಾವತಿಸದೆ ಕೋರ್ಟಿನಿಂದ ವಾರಂಟ್ ನಾಲ್ಕೈದು ಬಾರಿ ಹೋದರೂ ಅದು ಅವನಿಗೆ ಸರ್ವ ಮಾಡಲು ಆಗದೆ  ಆರೋಪಿ ಮನೆಯಲ್ಲೋ ಅಥವಾ ಎಲ್ಲಿಯಾದರೂ ತಲೆ ಮರೆಸಿಕೊಂಡಿದ್ದು ಹಾಯಾಗಿರುತ್ತಾನೆ  ಎರಡ್ಮೂರು ವರ್ಷಗಳಾದರೂ ಅವನಿಗೆ ವಾರಂಟ್ ಹೋದರೂ ಅವನ ಸುಳಿವಿಲ್ಲ  ಹಾಗಾದರೆ ಇಂಥವರನ್ನು ಪತ್ತೆ ಮಾಡುವ ಕೆಲಸ ಯಾರು ಮಾಡುವುದು   ಯಾರು ಹಣವನ್ನು ರಿಕವರಿ ಮಾಡುವುದು   ಯಾರು ಇಂತಹ ತಪ್ಪಿತಸ್ಥ ಆರೋಪಿಗಳನ್ನು ಹಿಡಿದು ಜೈಲಿಗೆ ತಳ್ಳುವುದು   ಖಂಡಿತವಾಗಿಯೂ ಈ ಕೆಲಸವನ್ನು ಒಂದೇ ಕೋರ್ಟ್ ಅಥವಾ ಪೊಲೀಸರು ಮಾಡಬೇಡವೇ   ಏನಾದರಾಗಲಿ ಚೆಕ್ ಬೌನ್ಸ್ ಕೇಸಿಗೆ ಜಾಮೀನುರಹಿತ ಅಪರಾಧ ಹಾಗೂ ಮೋಸಗಾರರಿಗೆ ಜೈಲು ಪಕ್ಕಾ ಎಂಬುದಂತೂ ಖಂಡಿತ  ಇನ್ನು ಮುಂದಕ್ಕಾದರೂ ಇಂತಹ ಕಠಿಣ ಶಿಕ್ಷೆಯಿಂದ ಚೆಕ್ ಬೌನ್ಸ್ ಪ್ರಕರಣಗಳು ಕಡಿಮೆಯಾಗುವುವು ಎಂದು ತಿಳಿಕೊಳ್ಳುವೆ

  • ಜೆ ಎಫ್ ಡಿಸೋಜ  ಅತ್ತಾವರ